ʼವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್

ನಾಟ್ಯಕಲೆಯಲಿ ಕಥನ ಶೈಲಿ ಸೇರಿ
ಅನೇಕ ಪಾತ್ರಗಳು ಒಂದುಗೂಡಿ
ಆಗಿತ್ತು ನಾಟಕ ಕಲೆಗೆ ಪ್ರಾರಂಭ
ಕನ್ನಡದಲ್ಲಿ ಮೊದಲು “ಮಿತ್ರವಿಂದಾ ಗೋವಿಂದ   “.

ಕನ್ನಡದ ಕಲೆಗಳಲ್ಲಿ ಅತಿ ಪ್ರಾಚೀನ
ಇಂದಿಗೂ ಜನಾನುರಾಗಿ ಅರ್ವಾಚೀನ
ದೈವ ಮತ್ತು ಭೂತಾರಾಧನೆಗೆ ಮೊದಲಾಗಿ
ಪ್ರಸಿದ್ಧವಾದವು ಜಾನಪದ   ಪ್ರಕಾರಗಳಾಗಿ.

ಕೋಲಾಟ ಕೋಲೆ ಬಸವ ಗಂಗೆ ಗೌರಿ ಸಂವಾದ
ದಾಸರಾಟ ಬೊಂಬೆಯಾಟ ಸಣ್ಣಾಟ ತೊಗಲು ಗೊಂಬೆ ಬಯಲಾಟ ತಾಳಮದ್ದಲೆ ಮೊದಲಾಯ್ತು  ಆರಂಭ
ಬೆಳೆದವು ಮೂಡಲಪಾಯ ಯಕ್ಷ ಗಾನದಿಂದ

ಮುಂದೆ ವೃತ್ತಿ ರಂಗಭೂಮಿಯ ಉಚ್ಛ್ರಾಯ ಕಾಲ
ವರದಾಚಾರ್ಯ ಗುಬ್ಬಿ ವೀರಣ್ಣ ಮೊದಲಾದ ಕಂಪೆನಿಗಳ
ವೈಭವದ ವೇಷಭೂಷಣ ವಿದ್ಯುಚ್ವಕ್ತಿ ದೀಪಗಳ
ಜೊತೆಗೆ ತಂದು ಮೆರೆದರು ಹೊಸ ಹೊಸ ಪ್ರಯೋಗಗಳ.



ನಂತರ ನಡೆದದ್ದು ಹವ್ಯಾಸಿ ರಂಗಭೂಮಿ ಯುಗ
ಕಾರಂತ ಕಾರ್ನಾಡ ಕಂಬಾರ ನಾಗಾಭರಣರ ಯುಗ
ರಂಗಭೂಮಿಗೆ ತಂದಿತ್ತು ನೀನಾಸಂ ರಂಗಾಯಣ ಕಲಾವಿದರ
ಇಲ್ಲಿ ಪ್ರವೃತ್ತಿಯಾಗಿ ನಾಟಕ ಮನ್ನಣೆಗೆ ಕಾತರ

ಚಲನಚಿತ್ರಗಳು ನಾಟಕದ್ದೇ ಮುಂದುವರೆದ ಭಾಗ
ಸಿನಿಮಾಗೆ ರಂಗಭೂಮಿ ನಟ ನಟಿಯರ ಆಗಮನ ಸದಾ
ನೆನೆಯದಿರಲಾದೀತೆ ರಾಜಣ್ಣ ಬಾಲಣ್ಣ ಉದಯ ಕುಮಾರರ
ಅಲ್ಲಿ ಸಂದವರು ಇಲ್ಲಿಯೂ ಸಂದರು ಎಲ್ಲೆಲ್ಲೂ ಮಾನ್ಯರು.

ಜನರ ಮನರಂಜನೆಯಲ್ಲಿ ಅಗ್ರಸ್ಥಾನ ಇದರದು
ದೂರದರ್ಶನ ಚಲನಚಿತ್ರಗಳಿಂದ  ಮಂಕಾಗಿರಬಹುದು
ಆದರೂ ಕುಂದುವುದಿಲ್ಲ ಆಕರ್ಷಣೆ ನಿರಂತರ
ನಾಟಕಗಳಿಗೆ ಸದಾ ಸಾರ್ವತ್ರಿಕ ಜನಪ್ರಿಯತೆಯ ಕಾಲ

ಮಾನವನ ಮನಸ್ಸಿನದು ನಿರಂತರ ಕ್ರಿಯಾಶೀಲತೆ
ಅದನ್ನು ಹೊರಗೆಡಹಲು ನೂರಾರು ದಾರಿ ಮಾರ್ಗ
ಜೀವನವೇ ದೊಡ್ಡ ರಂಗ ಭೂಮಿ ಮಹಾನ್ ವೇದಿಕೆ
ವಹಿಸುತ್ತಾ ಇರಬೇಕು ಭೂಮಿಕೆ ಸರಿಯಬೇಕು ಬಿದ್ದಾಗ ಯವನಿಕೆ.

———————–

3 thoughts on “ʼವಿಶ್ವ ರಂಗಭೂಮಿ ದಿನʼಕ್ಕೊಂದು ಕವಿತೆ-ಸುಜಾತಾ ರವೀಶ್

Leave a Reply

Back To Top