ಇಂಗ್ಲೀಷ್‌ ಭಾಷೆಯ ಕವಿತೆಯ ಅನುವಾದ ಬಾಗೇಪಲ್ಲಿಯವರಿಂದ



ಪ್ರಶಾಂತ ಸ್ಥಳದಿ ಕೂತು
ವೃಕ್ಷದಿಂದ ತರಗೆಲೆ ಕಳಚಿ ಬೀಳುವುದು ನೋಡೆ!
ಪ್ರತಿ ಸಮಸ್ಯೆಯೂ ಪತನಶೀಲವೆ ಕಾಲಋತುಗೆ ಅನುಗುಣವೆಂದು ನೆನಪಿಸುತ್ತದೆ

ನನಗೆ ಅವುಗಳ ಆಂತರ್ಯದ ಧ್ವನಿ ಕೇಳಿತು
‘ಶರತ್ಕಾಲ ಚಳಿಯ ಸಹಿಸಿ ಪತನಗೊಳ್ವುದ ಸಹಿಸು
ಋತುಗಳೆಲ್ಲವ ಅನುಭವಿಸುತ
ಬೇರಿನೆಡೆಗೆ ಗಮನ ನೀಡಿ
ಚೈತನ್ಯವ ಒಗ್ಗೂಡಿಸಿಕೊ’
ಎಂದು ತಿಳಿಹೇಳಿದವು

‘ಸಮಾಧಾನ ವಹಿಸು!
ವಸಂತಕಾಲದ ಪ್ರಥಮ ಸೂರ್ಯ ರಶ್ಮಿಗೆ ನಿರೀಕ್ಷಿಸು
ಹೊಸ ಹುಟ್ಟು ಹುಟ್ಟಿ ಬೆಳೆದು ಸಂಭ್ರಮಿಸು
ಸದೃಡಾವಾಗಿ ಬೆಳೆದು ಜ್ಞಾನಾರ್ಜನೆ ಪಡೆದು ಸಾರುತಿರು ಜಗಕೆ ಚಿಂತೇಕೆ
” ಸರಿವುದು ಎಲ್ಲವೂ ಮುಂದೆ.

—————————————–

Leave a Reply

Back To Top