ಅನಿತಾ ಮಾಲಗತ್ತಿಯವರ ಕವಿತೆ-ʼಸಮಯʼ

ಮಾರ್ಗಶಿರದಿಂದ ಪಾಲ್ಗುಣದವರೆಗೂ
ಸುತ್ತಿ ಸುಳಿದು ತಂಗಾಳಿ ಎತ್ತಿ ತಂದ
ಮದುರ ಸುಗಂಧ ಹನಿಯಾಗಿ
ಇಳೆಯ ಹುಡಿಗೆ ಇಳಿದ `ಸಮಯ’

ನೋಡಲಾರದೇ ರತಿಯ ಶೋಖ
ಕಣ್ಣೀರಿನೊಳು ಗಂಗೆ ಹನಿಯಾಗಿ
ನೊಂದವಳಿಗೆ ನ್ಯಾಯಕೇಳಿ ನಂದೀಶನಿಗೆ
ಅರ್ಜಿ ಕೊಡುವ `ಸಮಯ’



ಗಂಗೆಯ ವಿನಂತಿಗೆ ಒಲ್ಲೆನ್ನದ
ಗಂಗಾಧರನ ಬೋಳಾ ಸ್ವಭಾವ
ತನ್ನ ಜೀವರಾಶಿ ನೆನೆದು ಎಚ್ಚೆತ್ತು
ವಸಂತಗೆ ಜೀವದಾನ ಮಾಡಿದ `ಸಮಯ’

ಮರುಹುಟ್ಟು ಪಡೆದ ವಸಂತ
ಸಂತನಾದ ತೊರೆದು `ಕಾಮ’
ಎಲ್ಲೆಲ್ಲೂ ಚಿಗುರು-ಹಸಿರು
ಅಲ್ಲೆಲ್ಲ ಮದನ ಹೂವರಳಿಸಿದ ಸಮಯ

ನೀನಿಲ್ಲದ ಈ ಜಗವು ನಿರಾಮಯವು
ಸತ್ಯಂ ಶಿವಂ ಸುಂದರಂ ನಿತ್ಯವು ಶಂಕರ
ನಿನ್ನಿಂದಲೇ ಇಹ-ಪರವೆಂಬುದು
ಮತ್ತೆ ಸಾಬೀದಾಗುತ್ತಿರುವ `ಸಮಯ’

————————–

Leave a Reply

Back To Top