ವ್ಯಾಸ ಜೋಶಿ ಅವರ ತನಗಗಳು

ಸುಗ್ಗಿಯು ಮುಗಿದೊಡೆ
ಕೊನೆಯ ಹಬ್ಬ ಹೋಳಿ,
ರೈತನು ಖುಷಿಯಲಿ
ಆಡಿದನು ಓಕುಳಿ.
**
ಖುಷಿ ಪಡಲು ಮಾತ್ರ
ಎರಚದಿರು ಬಣ್ಣ,
ಕಷ್ಟವ ಮರೆಯಲು
ಬಣ್ಣವಾಡೋಣ ಅಣ್ಣ.
*
ಬಣ್ಣದಾಟ ಆಡೋಣ
ಎಲ್ಲ ಜಾತಿ ಬೆರೆತು,
ನಿರ್ಮಲದಿ ಮೀಯೋಣ
ದ್ವೇಷಾಸೂಯೆ ಮರೆತು.
**
ವೀರತ್ವದ ಕೇಸರಿ
ವಿಶ್ವಶಾಂತಿಗೆ ಬಿಳಿ
ಅಭಿವೃದ್ಧಿ ಹಸಿರು
ಶುಭ ತರುವ ಹೋಳಿ.
***
ಕಪ್ಪಾದ ಕೇಶರಾಶಿ
ಹುಬ್ಬು ಕಾಮನಬಿಲ್ಲು
ಕೆಂದುಟಿಯ ಒನಪು
ಬಣ್ಣವೇ ನಿನ್ನೇನಪು.
**
ಮಕ್ಕಳು ಹಿರಿಯರೂ
ಭೇದ ಭಾವ ಎನ್ನದೆ
ಗುರು ಶಿಷ್ಯರ ಕೂಟ
ಪ್ರೀತಿಯ ಬಣ್ಣದಾಟ.

—————

Leave a Reply

Back To Top