ಕಾವ್ಯ ಸಂಗಾತಿ
ಡಾ ಗೀತಾ ಡಿಗ್ಗೆ
ಜಗದಲಿ ನಿನಗಾರು ಸಮ?

ಜೀವ ಜಗದ ಉಸಿರು
ಒಡಲ ಹಸಿವು
ನೀಗಿಸುವ
ಸಸಿ ಸಂಕುಲವೇ
ನಿನಗಾರು ಸಮ?
ನೋವು ಕೊಟ್ಟವರಿಗೆ
ನೆರಳು ನೀಡುವ
ಏಟು ಕೊಟ್ಟವರಿಗೆ
ಹಣ್ಣು ಕೊಡುವ
ಕಲ್ಪತರುವೆ
ನಿನಗಾರು ಸಮ?

ಕತ್ತರಿಸಿದರೂ
ಮತ್ತೆ ಮತ್ತೆ
ಚಿಗುರಿ
ಅಸ್ತಿತ್ವ ತೋರುವ
ಗರಿಕೆಯೇ
ನಿನಗಾರು ಸಮ?
ಬಿದ್ದ ನೆಲದಲಿ
ಎದ್ದು ನಿಲುವ
ತುಳಿದ ಜಾಗದಲಿ
ಬೆಳೆದು ನಿಲುವ
ಬೀಜವೇ
ನಿನಗಾರು ಸಮ?
ಹಚ್ಚ ಹಸಿರಿನ
ಸಿಂಚನ
ಶೃಂಗಾರ
ಸಿರಿದೇವಿ
ನಿನ್ನ ಸೊಬಗಿಗೆ
ನಿನಗಾರು ಸಮ?
———————————–
ಡಾ ಗೀತಾ ಡಿಗ್ಗೆ.

ನಿಮ್ಮ ಸೊಗಸಾದ ಕವನಕ್ಕೆ ಯಾರು ಸಮ…
ಸುಂದರವಾದ ಕವಿತೆ
ಸುಶಿ
ಸರಳ ಸುಂದರ ಸೃಜನತೆಯ ಅಭಿವ್ಯಕ್ತಿ ಮೇಡಂ .