ವಾಣಿ ಯಡಹಳ್ಳಿಮಠ ಅವರ ಗಜಲ್

ನೀ ಇಲ್ದಾಗ ಬೀಸೊ ತಂಗಾಳಿನೂ
ಬಿರುಬಿಸಿಲಿದ್ದಂಗ ಅಂತಿದ್ದೀ ಹೆಂಗ್ ದೂರಾದಿ
ನೀ ಇಲ್ದಾಗ ಬಿದ್ದ ಬೆಳದಿಂಗಳು
ಕಗ್ಗತ್ತಲಿನ ಅಮಾಸಿ ಅಂದಿದ್ದೀ ಹೆಂಗ್ ದೂರಾದಿ

ನಿನ್ ಮಾರಿ ನೋಡಿದ್ರ, ನನ್ ನಗು ಮಾಸಲ್ಲ
ಮಾರಾಯಿತಿ ಅಂತಿದ್ದೀ ,
ನಿನ್ ನೋಡಕೊತ  ಹಗಲು ,ರಾತ್ರಿ
ಕಳಿಬೇಕಂತ ಹೇಳಿದ್ದೀ ಹೆಂಗ್ ದೂರಾದಿ

ನೋವು ನಲಿವಿನ್ಯಾಗ ನನ್
ಜೊತಿ ಇರ್ತೀನಂತ ಆಣಿ ಇಟ್ಟಿದ್ದಿ ,
ನೀ ಇಲ್ದಾಗ ನಕ್ಕ ನಗು, ಸುವಾಸನಿ  
ಇಲ್ದ ಸುಮದಂಗಂತ ಬರ್ದಿದ್ದೀ ಹೆಂಗ್ ದೂರಾದಿ

ಬರೀ ಒಂದ ಜನ್ಮಕ್ಕ ಮೀಸಲಿಲ್ಲ
ನಮ್ ಪ್ರೀತಿ ,
ತಾಯಿ, ತಂಗಿ , ಗೆಳತೀ ಎಲ್ಲಾ ನೀನ ಅಂತ
ನಕ್ಕಿದ್ದೀ ಹೆಂಗ್ ದೂರಾದಿ

ಇರ್ಲಾರ್ದ ಪ್ರೀತಿ, ಅದ ಅಂತ ಬಗದು
ತೋರಿಸಿದಿ ವಾಣಿಗಿ
ಎದ್ಯಾಗಿನ  ಆಸಿಗೀ ನೀನ ಉಸಿರಂತ
ಉಸುರಿದ್ದಿ ಹೆಂಗ್ ದೂರಾದಿ

——————

2 thoughts on “ವಾಣಿ ಯಡಹಳ್ಳಿಮಠ ಅವರ ಗಜಲ್

Leave a Reply

Back To Top