ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನನ್ನ ಕಂಡು ನಿನ್ನ ಕೆನ್ನೆ ಕೆಂಪೇರಿದ್ದು ಗಮನಿಸಿದೆ
ಮುಂಗುರುಳ ಎಡಗೈ ಸವರಿಸಿದ್ದು ಗಮನಿಸಿದೆ

ನೀ ನಿನ್ನ ಬಲಗಾಲಿನ ಹೆಬ್ಬೆರಳಲಿ ನೆಲವಕೆರೆದೆ
ಗೀಚಿದ್ದು ಪ್ರೀತೀ ಎಂಬ ಪದವೆಂದು ಗಮನಿಸಿದೆ

ತಲೆ ತಗ್ಗಿಸಿ ಕೈ ಉಗರ ಕಡಿಯಲು ಪ್ರಾರಂಭಿಸಿದೆ
ಹಲ್ಲು ಕಚ್ಚಿದಾಗ ಕಣ್ಣು ಮಿಟುಕಿಸಿದ್ದು ಗಮನಿಸಿದೆ

ಕುಡಿವ ನೀರು ತರಲು ಹೋಗಿ ಹಿಂದುರಿಗಿ ನೀರ ನೀಡಿದೆ
ಅಂಗೈಲಿದ್ದ ಮೆಚ್ಚಿದೆ ಬರಹ ತೋರಿಸಿದ್ದು ಗಮನಿಸಿದೆ.

ಕೃಷ್ಣಾ! ಅನನುಭವಿ ನಾನು ಹೆಣ್ಣ ಲೋಕವನರಿಯೆ
ಹೆಣ್ಣು ಒಲ್ಲೆ ಎನೆ ಬೇಕೆಂದು ಸೂಚಿಸಿದ್ದು ಗಮನಿಸಿದೆ

————————–

About The Author

Leave a Reply

You cannot copy content of this page

Scroll to Top