ಟಿ.ದಾದಾಪೀರ್ ತರೀಕೆರೆ-ಪ್ಯಾಲೇಸ್ತೇನ್ ಗೊಂದು ಪ್ರೀತಿಯ ಸಂದೇಶ

ಕೆಂಪು ಅಂದರೆ
ಅವಳ ತುಟಿಗಳ ಬಣ್ಣ
ಅಂತ ಅಷ್ಟೆ ಗೊತ್ತಿದ್ದ
ನನಗೆ
ಪ್ಯಾಲೇಸ್ತೇನ್
ನೆಲದ ಮೇಲೆ ರಕ್ತ ಹರಿವಾಗ
ಅವಳ ತುಟಿಗಳ ಬಣ್ಣ
ಬದಲಾಗಲಿ ಎಂದು
ಪ್ರಾಥಿ೯ಸುತ್ತೆನೆ

ಪ್ಯಾಲೇಸ್ತೇನ್ ನೆಲದ
ಮೇಲಿನ ಕ್ರೌರ್ಯಕ್ಕೆ
ನಾನು ಇಲ್ಲಿಂದಲೇ
ಉತ್ತರ ಕೊಡಬಲ್ಲೆ
‘ಪ್ರೀತಿ
‘ಮತ್ತಷ್ಟು ಪ್ರೀತಿ’
ಅವಳೊಂದಿಗಿನ ಇನ್ನಷ್ಟು ಪ್ರೀತಿ’
ಅದು ಅಪರಾಧ  ಆದರೂ ಸರಿಯೆ



ಸಾವುಗಳ ಲೆಕ್ಕ
ಸಿಗದಿರುವ ಪ್ಯಾಲೇಸ್ತೇನ್
ನೆಲದಲ್ಲಿ ನಿಂತು
ಹೃದಯ ಬಗೆದರೆ
ಸತ್ತು ದಫನ್ ಆಗಿರುವ
ಸುಖಗಳ ಲೆಕ್ಕ ಯಾವ ಮಹಾ !

ಇಗೋ, ಪ್ರತಿಷ್ಟೆಗಳೆ‌ ಹಾಗೇ
ಗಡಿಗಳು , ಬೇಲಿ ಹಾಕಿಕೊಂಡರು
ಒಳಗೆ ಇರಕ್ಕಾಗಲ್ಲ

ನಿಜ ದ್ವೇಷ ಕಿತ್ತು ‘ಪ್ರೀತಿ ‘
ಒಳ ನುಸುಳ ಬೇಕಿತ್ತು
ಹಾಗಾಗದ ಪ್ಯಾಲೇಸ್ತೇನ್
ಗಡಿಯಲ್ಲಿ ಹಾಲು ಕುಡಿವ
ಹಸು ಗೂಸು ಕಂಕುಳಲ್ಲೆ
ನಗುತ್ತ ಸಾಯುತ್ತಿದೆ
 
ಬದುಕೆ ಸಂಭ್ರಮ ಎಂದು ಕಲಿಸಿದ
ನೀನು ಒಮ್ಮೆ ನೋಡು
ಸಾವು ಎಷ್ಟು ಸಂಭ್ರಮವಾಗಿದೆ
ಪ್ಯಾಲೇಸ್ಚೇನ್ ನಲ್ಲಿ

————————

Leave a Reply

Back To Top