ಕಾವ್ಯ ಸಂಗಾತಿ
ಇಮಾಮ್ ಮದ್ಗಾರ
ಇಳಿದುಬಿಡು ಇಳೆಗೆ
ಬಾವಿಗೂ..
ಬಾಯಾರಿದೆ
ದಯಮಾಡಿ ಇಳಿದು
ಬಿಡು ಸೀವರ
ನೀನು ಇಳೆಗೆ
ಸಹಿಸಲಾಗುತ್ತಿಲ್ಲ
ವಸುಧೆಗೆ ತನ್ನೊಡಲ
ಬಿಸಿಯ ! ಇಳಿದು ಬಿಡು
ಸೀವರ ನೀನು ಇಳೆಗೆ
ನಿನ್ನ ಕಸುವೆಲ್ಲಾ..
ಕರಗುವ ತನಕ
ಸುರಿಸಿ ಬಿಡು ನಿನ್ನಬೆವರ !
ಹಸಿರಾಗಿ ಅವನಿ
ನಳನಳಿಸಲಿ ಇಳಿದು ಬಿಡು
ಸೀವರ ನೀನು ಇಳೆಗೆ
ಬಡಿಯಲು ಹೇಳಿ
ಗುಡುಗಿಗೆ !
ಸಿಡಿಯಲು ಹೇಳಿ
ಸಿಡಿಲಿಗೆ !
ಮಿಂಚಲು ಹೇಳಿ
ಮಿಂಚಿಗೆ !
ಅವನಿಯ ಮೈಯ್ಯ…
ದಡವಲಾದರೂ..
ಇಳಿದು ಬಿಡು ಸೀವರ
ನೀನು ಇಳೆಗೆ !
ಹಸಿಯಾಗಲಿ
ಶಾರ್ವರಿ
ಹಸಿರುಡಿಸಿ ಬಿಡು
ಸಾಕು ವಸುಧೆಗೆ !
ಬಾವಿಗೂ ಬಾಯಾರಿದೆ
ಕುಡಿಯಲು ನೀರಿಲ್ಲ
ಜೀವಿ ಜೀವಗಳಿಗೆ
ಇಳಿದು ಬಿಡು ಸೀವರ
ನೀನು ಇಳೆಗೆ !
—————————–
ಇಮಾಮ್ ಮದ್ಗಾರ