ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು

ಕವಿತೆಯಲ್ಲದ ಕವಿತೆಗೆ
ಬಂದಿವೆ ಹೊಸ ಕಾಲು
ಬೆಳ್ಳಗಿರುವುದೆಲ್ಲ ಅಲ್ಲವೇ ಅಲ್ಲ
ನಿಜಕು ಶುದ್ಧ ಹಾಲು

ಭಾವಗಳ ಗೋರಿಗಟ್ಟಿ
ಬರಿದೆ ಕುಣಿಯುತಿದೆ ಶಬ್ದ
ದಣಿಯುತಿದೆ ರಾಗ ರಸ
ಒಲ್ಲದ ಸೋಲನಪ್ಪಿ ಸ್ತಬ್ಧ ನಿಶ್ಶಬ್ದ

ಮಂಚವೇರುತಿದೆ ಮಾತು
ಕಾವ್ಯದೋಣಿಗಿಟ್ಟು ಸಣ್ಣ ತೂತು
ದಾರಿ ತೋರದೆ ಈಜುತಿದೆ
ಕವಿತೆಗಂಟಿದ ಪುಟ್ಟ ಬಾತು

ಏಳುಬೀಳುಗಳ ನಡುವೆಯೇ
ಸಾಗಿದೆ ಪದ್ಯದಿರುವೆ ಸಾಲು
ಕವನಕೆ ಕದವನಿಕ್ಕಿ ಗದ್ಯವೇ
ಸದ್ದುಗೈಯುತಿದೆ ಬಡಿದು ಡೋಲು

ತನ್ನೊಳಗನೇ ತೂರಿದರೂ
ಸುಮ್ಮನಿದೆ ಮುಗ್ಧ ಕಾವ್ಯದಮ್ಮ
ಹೂತುಹೋಗಿರುವ ನಿನ್ನ
ಮೇಲೆತ್ತುವವರಾರು ಹೇಳೆ ಅಮ್ಮ?

ವಸಂತ ಕಾಲದಿ ನಿತ್ಯ
ಕರ್ಣಾನಂದ ಕೋಗಿಲೆಯ ಗಾನ
ಮಳೆಗಾಲದೀ ಸಮಯದಿ
ಕಪ್ಪೆಗಳದೇ ಸಾಮ್ರಾಜ್ಯ ಕೇಳು ಜಾಣ!

———————————

One thought on “ನೀ ಶ್ರೀಶೈಲ ಹುಲ್ಲೂರು ಅವರ ಕವಿತೆ-ಕವಿತೆಯಳಲು

Leave a Reply

Back To Top