ಕಾವ್ಯ ಸಂಗಾತಿ
ಡಾ. ಮೀನಾಕ್ಷಿ ಪಾಟೀಲ್
ಹರಯ
ಹದಿಹರೆಯ
ಹಸಿ ಒಗರು
ಮಾಗಬೇಕು
ಪಕ್ವತೆಯಲಿ
ರುಚಿಸುವುದು
ಹಣ್ಣು ಹೆಣ್ಣು
ತಾರುಣ್ಯ
ವಸಂತ ಯುಗ
ಭಾವನೆಗಳ
ತಾಕಲಾಟ
ಸಂಕ್ರಮಣದ
ಹೊಸ್ತಿಲಲಿ
ನಳ ನಳಿಸುವ
ಹರೆಯ
ಎಚ್ಚರ ಸ್ಥಿತಿ ಇರಲಿ
ಪ್ರೀತಿ ಪ್ರೇಮ
ಹಸಿಹಸಿ ವ್ಯಾಖ್ಯಾನ
ಹುಸಿಯಾಗದಿರಲಿ
ಬದುಕು
ಕಂಡವರ ಮೋಹಕ್ಕೆ
ಬಲಿಯಾಗದಿರಲಿ
ಗೆಳೆತನದ ನೆಪ
ಬೇಲಿ ದಾಟದಿರಲಿ
ಭಾವ ಬುದ್ಧಿಗಳ
ಸಮಸ್ಥಿತಿ ಇರಲಿ
——————————
ಡಾ. ಮೀನಾಕ್ಷಿ ಪಾಟೀಲ್