ಕಾವ್ಯ ಸಂಗಾತಿ
ಸುಕುಮಾರ
ಗೈರ್ ಮುರದಫ್ ಗಜ಼ಲ್
ಹೊಳೆವ ಮುತ್ತುಗಳೋ ಭಾವ ಸೂಸುವ ಮಾಲಿಕೆಯೋ ಅರಿಯೇ
ಸೆಳೆವ ಕನಸುಗಳೋ ತಂಪೆರೆವ ಮಲಯ ಮಾರುತವೋ ತಿಳಿಯೇ
ಸಸಿಯ ಕಂಕುಳಲಿ ಮಗುವಾಗಿ ಪಕಳೆ ಅರಳಿಸಿ ಅರಸಿಯಾದೆ
ಚೆಲುವ ಕನ್ನಿಕೆಯೋ ನಲಿವ ಮದನಿಕೆಯೋ ನಗುವೊಂದ ಬಿರಿಯೇ
ತುರುಬಿಗೆ ಅಂದವ ನೀಡಿ ದುಂಬಿಗೆ ಮದನಿಕೆ ಆದೆ
ಮಕರಂದ ಹರಿಸಿ ಗಂಧವ ಹರಡಿ ಗಂಧರ್ವನ ಕರಿಯೇ
ರಮಣ ತಂದ ಅನುರಾಗದ ಸಂಕೇತ ಎದೆಗೆ ತಾಕಲು
ಮಂದಸ್ಮಿತದಿ ಕಣ್ ಸನ್ನೆ ಮಾಡುತ ಮೋದದಿ ಜರಿಯೇ
ಪಿಸುಮಾತಲಿ ಒಮ್ಮೆ ನಶೆಯೇರಿಸಿ ಬಿಡೆ ಮಲ್ಲಿಕೆಯ ಹೊತ್ತು
ತೇಲಿಬಿಡು ಗಾಳಿಯಲಿ ಕುಮಾರನೊಡನೆ ಅಹರ್ನಿಶೆಯ ಭೇಧಿಸುತ ನೀರೆಯೇ
——————————-
ಸುಕುಮಾರ