ಕಾವ್ಯ ಸಂಗಾತಿ
ಮೀನಾಕ್ಷಿ ಹನಮಂತ ಓಲೇಕಾರ
‘ಚಂದ್ರ ಚಿಗುರಿದ ಚಿತ್ರ….’
ಮುಗಿಲಿನ ಮಡಿಲಿನಲಿ
ಮಗ್ಗುಲು ಬದಲಿಸಿದ ರವಿ
ಕಣ್ಣು ಚಿವುಟಿದ ಕತ್ತಲೆಗೆ
ಚಂದ್ರ ಚಿಗುರುವ ಚಿತ್ರ ಬರೆದ ಕವಿ
ಹಗಲಿನ ಹೆಜ್ಜೆಗೊಮ್ಮೆ ಕೈ ತಾಕಿಸುವ
ಇರುಳಿನ ಗೆಜ್ಜೆಯ ನಾದ
ಮೈ ಮನ ಮರೆಯಲು ಬೇರುರುವ ಉನ್ಮಾದ
ಕರ್ಣಗಳಿಗೂ ಕಂಪು ಸವಿ
ಕಂಗಳಿಗೂ ತಂಪು ಸೈ ಏನಿಸುವ ಛವಿ
ಇರುಳಿನ ಚುಕ್ಕಿಗಳು ಬಿತ್ತರಿಸಿ ಚಿಮ್ಮಿದ ಚಿತ್ತಾರ
ಹಗಲಿನ ಬೊಗಸೆಗೆ ಹಿಡಿದಿಟ್ಟರ
ತಾಸಿನಲ್ಲೇ ಊರೆಲ್ಲ ಉಕ್ಕಿದವು,
ಭಾವಗಳ ಬೆರಳ ತಾಕಿಸಿದ ಮೋಡಗಳು
ತುಟಿಯಂಚಿನಲಿ ನಕ್ಕಳು ಭುವಿ
ದಿಗಿಲೆದ್ದ ಹೆಕ್ಕಿ ಹೆಣೆದ ಕನಸುಗಳು
ಹೆಗಲನೇರಿ ಹಾದಿ ಹಿಡಿದವು
ನಿದ್ದೆಯೊಂದು ತೊಟ್ಟು ಕೂತಾಗ ಕಾವಿ.
ಮೀನಾಕ್ಷಿ ಹನಮಂತ ಓಲೇಕಾರ..
Nice ka