ಬುದ್ಧಂ ಶರಣಂ ಗಚ್ಛಾಮಿ ಕವಿತೆ ಪ್ರೊ. ಸಿದ್ದು ಸಾವಳಸಂಗ

ಸಿದ್ಧಾರ್ಥನೊಳಗಿದ್ದ ಬುದ್ಧ
ಮಧ್ಯರಾತ್ರಿ ಮೆಲ್ಲಗೆ ಎದ್ದ !
ಮನೆ ಮಡದಿ ಮಕ್ಕಳು ತ್ಯಜಿಸಿ
ನಡದೇ ಬಿಟ್ಟ ಕತ್ತಲೆಯ ರಾತ್ರಿಯಲಿ !
ಕಾಡು ಮೇಡು ಬೆಟ್ಟ ಗುಡ್ಡ ಅಲೆದ
ಹಸಿವು ದಾಹ ಮರೆತು ಮುನ್ನಡೆದ
ಹಿಂಗಲಿಲ್ಲ ಜ್ಞಾನ ಮೋಕ್ಷದ ಹಸಿವು !!

ಋಷಿ ಮುನಿಗಳ ದರುಶನ ಪಡೆದ !
ತಮಗರಿತ ಜ್ಞಾನ ಅವರು ಅರುಹಿದರು
ಮುಂದೇನು ಎಂಬುದಕ್ಕೆ ಉತ್ತರವಿಲ್ಲ !
ಆಮೇಲೆ ದೇಶ ಸಂಚಾರ ಮಾಡಿ
ತನಗರಿಯದ ವಿಷಯ ಮನಗಂಡ !!

ಬೋಧಿವೃಕ್ಷದ ಕೆಳಗೆ
ಶುದ್ಧ ಪೂರ್ಣಿಮೆಯಂದು
ಆಯಿತು ಜ್ಞಾನೋದಯ !
ಬುದ್ಧನಾಗಿ ಹೊರಬಂದ
ಮುಖದ ತೇಜಸ್ಸು ಮಂದಹಾಸ
ಜಗವ ಗೆಲ್ಲುವ ಪರಿ ನವನವೀನ  !!

ಆಸೆಯೇ ದುಃಖಕ್ಕೆ ಮೂಲ
ಇದನರಿತರೆ ಯಾವ ನೋವಿಲ್ಲ !
ಬಿಟ್ಟುಬಿಡು ಮನದ ದುರಾಸೆ
ಎಂದಿಗೂ ಬರಲಾರದು ನಿನಗೆ ನಿರಾಸೆ !
ಬುದ್ಧನ ತತ್ವಗಳು ಜಗತ್ ಪ್ರಸಿದ್ದ
ತನ್ನ ಸಂಘದೊಂದಿಗೆ ಬುದ್ಧ ದೇಶ ಸುತ್ತಿದ
ಕತ್ತಲೆಯಲಿದ್ದವರನು ಮೇಲೆತ್ತಿದ !
ಬುದ್ಧ ಶರಣಂ ಗಚ್ಛಾಮಿ !!

——————–

Leave a Reply

Back To Top