ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ನ ಕಾಣುವ ದಿನ
ತುಟಿಗಳಿಗೆ ಅದೇನೋ ಸಡಗರ
ರಂಗು ಬಳಿದು ಸಜ್ಜಾಗಿರುತ್ತವೆ
ಏನು ಮಾತಾಡಲಿ?
ಹೇಗೆ ಮಾತಾಡಲಿ?
ಪದಗಳಿಗೆ ಹುಡುಕಾಡಿ ತಡಕಾಡಿ
ಆನಂದದ ಕಡಲಿನಲ್ಲಿ ಏನೇನೂ
ಸಿಗದಾದ ಮೇಲೆ
ಸೋತು ಶರಣಾಗುತ್ತವೆ!

ನನ್ನಲ್ಲಿ ಇರುವ
ಒಂದೇ ಧೈರ್ಯವೆಂದರೆ!?
ಸೋಲುವುದಿಲ್ಲ ಈ ಕಣ್ಣುಗಳು
ನೋಡುವುದಿಲ್ಲ ನೆಲ
ನೀ ಎದುರಲ್ಲೇ ಇರಲು!

ನೀ ನೆಟ್ಟ ದೃಷ್ಟಿಗೆ
ನೀ ಹಾಕಿದ ಪ್ರಶ್ನೆಗೆ
ಎಷ್ಟೊಂದು ದಿಟ್ಟ ಸ್ಪಷ್ಟ ಉತ್ತರ
ಜಗದೆಲ್ಲ ಸಮಾಚಾರಗಳ
ಅರುಹಿ ತಿಳಿಯುವವು

ಈ ಮುಗಿಯದ ಮಾತುಗಳ ನಡುವೆ
ಕಾಲ ಜಾರಬಹುದಷ್ಟೇ ಹುಡುಗ ;
ಪ್ರೇಮ ತೀರುವುದಿಲ್ಲ !


About The Author

Leave a Reply

You cannot copy content of this page

Scroll to Top