ಕಾವ್ಯ ಸಂಗಾತಿ
ಬಾಗೇಪಲ್ಲಿ
ಗಜಲ್ (ಜುಗಲ್ ಕಾಫಿಯಾ)
ಅದೆಷ್ಟು ಪ್ರಾಶಾಂತತೆ ನೆನೆಯುತಿರೆ ನಿನ್ನ
ಅದೆಂತಹ ನಿಶ್ಚಿಂತತೆ ಕನಸುತಿರೆ ನಿನ್ನ
ಒಬ್ಬರನುಭವ ಇನ್ನೊಬ್ಬರದಾಗಲಾರದು
ಏಕಚಿತ್ತದ ಅನಂತತೆ ಗಜಲಾಗಿಸುತಿರೆ ನಿನ್ನ
ಒಬ್ಬಂಟಿ ನಾ ನನ್ನನೇ ಬೇಟಿಯಾಗುವೆ
ಅಪರೂಪದ ಏಕಾಂತತೆ ಚಿತ್ರಿಸುತಿರೆ ನಿನ್ನ
ಉತ್ತರ ದ್ರುವತಾರೆ ಎನಿಸುವುದು ಕಂಡಾಗ
ವಿದ್ಯುಲ್ಲಾಲಂಕೃತತೆ, ನೋಡುತಿರೆ ನಿನ್ನ
ಕೃಷ್ಣಾ! ಅಂದದ ಹೆಣ್ಣಿಗೆ ಬಿಂಕ ಹೆಚ್ಚೆಂಬರು
ಲಜ್ಜೆಇಲ್ಲದೆ ಕಕ್ಕುಲಾತೀತತೆ ಕಾಣುತಿರೆ ನಿನ್ನ
ಬಾಗೇಪಲ್ಲಿ