ಪೂರ್ಣಿಮಾ ಸುಳ್ಯ ಕವಿತೆ-‘ಭರವಸೆಯೇ ಬದುಕು’

[ಬದುಕೆಂದರೆ ಹೀಗೆ
ಕೋಲ್ಮಿಂಚಿನ ಹಾಗೆ
ಒಂದೊಮ್ಮೆ ನಲಿವು….
ಬೆನ್ನು ತಿರುಗಿಸೆ ನೋವು…
   
ಇರುವುದೆಲ್ಲವ ಬಿಟ್ಟು, ಬಯಸಿ ಮತ್ತೊಂದಷ್ಟು
ಹಾತೊರೆವ ಹುಚ್ಚು ಮನಸಿನ
ಸುತ್ತ ಹೆಣೆದಿರುವ ಬಯಕೆಯ ಬದುಕು….

ಬಯಸಿದ್ದು ಸಿಗದೆ
ವ್ಯಯಿಸಿದ್ದು ದಕ್ಕದೇ…
ಸೋತು ಹೈರಾಣಾಗಿಸುವ
ನಿರಾಶೆಯ ಬದುಕು…..

ಕಂಡ ಕನಸುಗಳು ಕೂಡಲೇ
ನನಸಾದ
ಮಿಡಿದ ಮನಸುಗಳು ಮರಳಿ ಒಂದಾದ
ಆಶಾಕಿರಣವೇ ಈ ಬದುಕು

ನೋವು ನಲಿವುಗಳ
ಆಸೆ, ನಿರಾಸೆ….
ಬಯಕೆ.. ಕಾಮನೆಗಳ ಹಿಮ್ಮೆಟ್ಟಿ
ಈ *ಬದುಕ ನೀ ಬದುಕು

ಬದುಕೆಂಬುದು ನಾಳೆಗಳ ಸಂತೆ
ಅದಕ್ಕೇಕೆ ಇಂದಿಗೇ ಚಿಂತೆ
ತುಟಿಯ ಮೇಲೊಂದು ಮುಗುಳ್ನಗೆಯ ನೆಟ್ಟು

ಭರವಸೆಯಿಂದಲಿ ಬಾಳಿ ಬದುಕು..

Leave a Reply

Back To Top