ಡೋ ನಾ.ವೆಂಕಟೇಶ ಕವಿತೆ-ಕಾವ್ಯದ ಇಂಪು

ಪ್ರೇಮದ ಕವಿತೆ ಚಿನ್ನ
ಕಥೆ ಆಗದಿರೆ ಚೆನ್ನ!

ಕಣ್ಣು ಕಿವಿ ಮೂಗು ಬಾಯಿ ಎಲ್ಲೆಡೆ
ಪ್ರತಿ ಕ್ಷಣದ ಸ್ಪರ್ಷದ ಹರ್ಷ
ದಾಖಲಿಸಿ ತಾಮ್ರ ಶಾಸನದಲ್ಲಿ
ಬಾರಿಸು ಡಂಗುರ
ರಿಂಗಣಿಸು ಟಿಂಪ್ಯಾನಿಕ್ ಮೆಂಬ್ರೇನ್
ದೊಳಗೆ ಪ್ರತಿಧ್ವನಿಸಿ ಅನುಕ್ಷಣ!

ಕಿವಿಯೊಳ ಹೊಕ್ಕ
ಅನುರಾಗದ ಹಾಡು
ರಾಗ ತಾನಗಳಿಲ್ಲದೇ
ಪಲ್ಲವಿಗಳಿಲ್ಲದೆ
ಶುದ್ಧ ಸ್ವರಾಂಜಲಿ
ಸಮೃದ್ಧ ಶ್ಯಾಮಲಿ
ಪ್ರೀತಿಯ ಕಾವ್ಯಾಂಜಲಿ
ರಸ ಮಂಜರಿ!        

ಕಾಮನೆಯಿಲ್ಲದ ಪ್ರೀತಿ
ಶುದ್ಧ ಅಪರಂಜಿ-
ಬಯಸಿದಾಗ ಒಡವೆ
ಬೇಡವಾದಾಗ ಒಲವ ಹೊಳೆ.
ಸೇರಿದರೆ ಸಂಗಮ
ಇಲ್ಲದಿರೆ ಬರೆ ಜಂಗಮ ಕಳೆ

ನಿನ್ನ ನಿಲುವು
ನಿನ್ನ ಪಂಚೇಂದ್ರಿಯಗಳ ಸುಹಾಸ
ನಿನ್ನದೇ ಚಂದ್ರಹಾರ
ನಿನ್ನದೇ ಸೂರ್ಯಕಾಂತಿ

ನಿನ್ನ ಸ್ವರ ಸಂಗೀತಗಳ ಚೆಲುವು
ನಿನ್ನ  ಮುಖ ಮಂದಹಾಸದ ಗುಳಿ.
ಎದೆಯಲ್ಲಿ ತಿದಿ ಒತ್ತಿದ ಬೆಂಕಿ!
ಶತ ಶತ ವೋಲ್ಟೇಜ್ಗಳ ಕಾವು-

ಕಾವ್ಯ ಉದಯಿಸುವ ಹೊತ್ತು
ಹೊತ್ತು ಗೊತ್ತಿಲ್ಲದ ಹೊತ್ತಿನ
ನಶೆಯ ವಸ್ತು!

ಹೀಗೇ
ಕವಿತೆ ಭೌತಿಕವಾಗಿ
ಕಾವ್ಯ ಸಿಂಚನವಾಗಿ
ತಂಪಿನ ಪೆಂಪು
ಪ್ರೇಮ ಕಥೆಯಾಗದೇ
ಕಾವ್ಯವಾಗೇ ಹಾಡಲಿ
ಇಂಪು!!


6 thoughts on “ಡೋ ನಾ.ವೆಂಕಟೇಶ ಕವಿತೆ-ಕಾವ್ಯದ ಇಂಪು

  1. ವೆಂಕಟೇಶ್, ನಿಮ್ಮ “ಕಾವ್ಯದ ಇಂಪು” ಕವಿತೆ ತುಂಬ ಇಂಪಾಗಿದೆ. ‘ಕಾವ್ಯ ಉದಯಿಸುವ ಹೊತ್ತು
    ಹೊತ್ತು ಗೊತ್ತಿಲ್ಲದ ಹೊತ್ತು
    ನಶೆಯ ವಸ್ತು!’
    ಇಂಥ ಆಯಸ್ಕಾಂತೀಯ ಸಾಲುಗಳು ಆನಂದಮಯ!
    ಅಭಿನಂದನೆ ನಿಮಗೆ.

    1. ಮೂರ್ತಿ,ಈ ವಯಸ್ಸಿನಲ್ಲಿ ಒಂದು love poem ! ಒಂದು ಗಾದೆ : “ಹತ್ತರ ಕುಟೆ ಹನ್ನೊಂದು” ಅಂತ! ಹೀಗಾಗಿ ಒಬ್ಬ ಪ್ರೇಮ ಕವಿ!
      Thanks Murthy

  2. “ಕಾವ್ಯದ ಇಂಪು “
    ತುಂಬಾ ಮಧುರವಗಿದೆ ನಿಮ್ಮ ಈ ಕವಿತೆ
    ವೆಂಕಣ್ಣ.
    ಯುವ ಅವಧಿಯ ಸವಿನೆನಪುಗಳನ್ನು
    ಮರಳಿಸುತ್ತಿದೆ. ಓದಿ ಆನಂದವಾಯಿತು.
    ಧನ್ಯವಾದಗಳು.

    1. ಧನ್ಯವಾದಗಳು Manjunath.
      ಏನೇ ಬರೆದರೂ ನಿಮ್ಮ thumbs up ನನಗೆ ಖಂಡಿತ ಅಂತ ಗೊತ್ತು
      Thanq Manjanna!

  3. ಪ್ರೇಮದ ಸೆಲೆಯ ಬಗ್ಗೆ ಮತ್ತೊಂದು ಉತ್ತಮ ಕವನ.. ….ಸೂರ್ಯ ಕುಮಾರ್

Leave a Reply

Back To Top