ಸುವಿಧಾ ಹಡಿನಬಾಳ ಅವರ ಮಕ್ಕಳ ಕವಿತೆ-ಬೀಳ್ಕೊಡುಗೆ

ಮಕ್ಕಳಿಗಂತೂ ಖುಷಿಯೋ ಖುಷಿ
ನಾಳೆ ನಮ್ಮ ಬೀಳ್ಕೊಡುಗೆ!

ರಾತ್ರಿಯೆಲ್ಲಾ ನಿದ್ದೆ ಇಲ್ಲ
ಕನಸಿನ ತುಂಬಾ ಪೋಟೋ ಪಾರ್ಟಿ

ಬೇಗ ಬೇಗ ಬೆಳಗಾಗ್ಬೇಕು
ಹೊಸ ಡ್ರೆಸ್ ಹಾಕೊಂಡು ಹೋಗ್ಬೇಕು

ನಮ್ ಟೀಚರ್ ಹಿಂದೆ ನಿಂತ್ಕೋಬೇಕು
ನನ್ ಗೆಳತಿ ಜೊತೆಗೇ ನಿಲ್ಬೇಕು

ನಿಮ್ಗೆ ಅನ್ಸಿದ್ ಹೇಳಿ ಅತಂದ್ರೆ
ಹೇಳೋಕಾಗ್ದೆ ಹೆಣ್ಮಕ್ಳೆಲ್ಲ ಸೊರ ಸೊರ

ಸುರಿಸಿ ಅತ್ತು ಕರ್ಚಪಿಂದ
ಕಣ್ವರ್ಸ್ಕೋತಾ ಬರೋ ಕಾಲ

ಅವರನ್ ನೋಡಿ ಗಂಡ್ಮಕ್ಳೆಲ್ಲ
ಮುಸಿಮುಸಿ ನಗೋ ಕಾಲ

ಇವ್ರನ್ ನೋಡಿ ಟೀಚರ್ ಕಣ್ಣು
ಕೊಳ ಆದ್ರೂ ಎರಡ್ ಮಾತಾಡಿ

ಬೀಳ್ಕೊಟ್ ನೆನಪು ಇನ್ನೂ ಹಸಿ ಆಗ್ಲೇ ಎಷ್ಟೊಂದ್ ಹೈಕ್ಳ ಬೀಳ್ಕೊಟ್ಟಾಯ್ತು!

ವರುಷ ವರುಷ ಮತ್ತೆ ಉರುಳಿ
ಬಂದೇ ಬಿಡ್ತು ಮತ್ತೊಂದ್ ಬೀಳ್ಕೊಡುಗೆ!

ಎಷ್ಟೇ ಬಯ್ಲಿ ಎರಡೇಟ್ ಹಾಕ್ಲಿ
ನೀವಂದ್ರೆ ನನಗಿಷ್ಟ ಎಲ್ಲೆ ಇರಿ

ಹೇಗೇ ಇರಿ ನಿಮ್ಮೊಳ್ಗಿರುವ
ಮುಗ್ಧತೆ ಬದ್ಧತೆ ನಿಮ್ಮೊಳ್ಗಿರಲಿ

ನಗ್ತಾ ನಗ್ತಾ ಹೀಗೆ ಇರಿ ಸದಾಕಾಲ
ನಿಮ್ಮೆಲ್ರ ನೆನಪು ನನ್ನೊಳ್ಗೆ ಚಿರಕಾಲ


2 thoughts on “ಸುವಿಧಾ ಹಡಿನಬಾಳ ಅವರ ಮಕ್ಕಳ ಕವಿತೆ-ಬೀಳ್ಕೊಡುಗೆ

Leave a Reply

Back To Top