ವ್ಯಾಸ ಜೋಶಿಯವರ ತನಗಗಳು

ಅರಳಿದ ಹೂವಿಗೆ
ದುಂಬಿಯ ಧ್ವನಿಮಾತ್ರ,
ಬೇರೆ ಏನೂ ಕೇಳದು
ಪ್ರೀತಿ  ಜಾಣಕಿವುಡು.
****
ಕರಗುತಿಹ  ಮೋಡ
ಧರೆಯಲ್ಲಾ ತಂಪಾಗಿ
ಕುಣಿಯಿತು ನವಿಲು
ಮಳೆಯ ಹನಿಗಾಗಿ.
****
ನೀರವ ಗಾಢಮೌನ
ವಿಚಲಿತನಾಗದೆ
ಮುಖವನ್ನೇ ಓದಿದೆ
ಪ್ರೀತಿಯಲ್ಲಿ ಪಾಸಾದೆ.
****
ಒಬ್ಬರ ಸಡಿಲಿಕೆ
ಮತ್ತೊಬ್ಬರ ಏರಿಕೆ
ಪ್ರೀತಿ ಕುದುರಿದರೆ
ಒಲವೆಂಬ ವ್ಯಾಪಾರ.
****
ಮನದೊಳಗ್ಹೊರಗೂ
ಮೋಡ ಕವಿದ ಸ್ಥಿತಿ
ಕೃತಜ್ಞ ಕೋಲ್ಮಿಂಚಿಗೆ
ಅಂಜಿದ್ದಕ್ಕೆ ಅಪ್ಪುಗೆ.
***
ಚುಚ್ಚುವ ಸೂಜಿಗೊಂದು
ಇರುವದೊಳ್ಳೇ ಸ್ನೇಹ,
ದಾರದ ಸಹವಾಸ
 ಜೋಡಿಸುವ ಕೆಲಸ.

——————————

Leave a Reply

Back To Top