ಮಾಲಾ ಚೆಲುವನಹಳ್ಳಿ ಕವಿತೆ-ವಿವರ

ಕಾವ್ಯ ಸಂಗಾತಿ

ಮಾಲಾ ಚೆಲುವನಹಳ್ಳಿ

ವಿವರ


[ಗೆಜ್ಜೆ ಕಾಲಿನ ಹೆಜ್ಜೆ ಹೆಜ್ಜೆಯಲಿ
ಪ್ರೀತಿ ತುಂಬಿ ಹರಿಯುತಿರಲಿ
ಲಜ್ಜೆಗೆ ಬಾಗಿರುವ ವದನದಲಿ
ಮಂದಾರ ನಗುವೇ ತುಂಬಿರಲಿ

ತರಳೆ ನಡಿಗೆಯು ಜಿಂಕೆಯಂದದಿ
ಮನದ ವೇಗವು ಮಿಂಚಿನಂತೆಯೆ
ತನುವ ಕಾಂತಿಯ ತೋರಿ ಮುದದಿ
ಉಡುಗೆ ಬಿಂಬಿಸಲಾ ಸಂಸ್ಕೃತಿಯೆ

ಜೇನು ಹರಿಯಲು ಅಧರದಿಂದಲಿ
ಸೊಲ್ಲು ಸೊಲ್ಲಲು ವೀಣೆ ನಾದವು
ಸಿಂಧೂರ ತಿಲಕವಿದೆ ಕೆಂಬಣ್ಣದಲಿ
ಲೋಪವೆಲ್ಲಿದೆ ಚರಿತೆ ರಂಜಿತವು

ಕದಪು ವರ್ಣವು ಬಂಗಾರದಂತೆ
ಸ್ಪರ್ಶ ಸುಖವದೆ ಸ್ವರ್ಗ ತೋರಿದೆ
ನೋಟ ಮಾದಕ ಪ್ರೇಮ ಕವಿತೆ
ವಿವರ ಮೀರಿದ  ಭಾವ ಎಂದಿದೆ

ಮುಡಿಯ ಅಲಂಕಾರಕೆ ಮೊಲ್ಲೆಯು
ಕಂಪಿನೊಂದಿಗೆ ಎದೆಯ ಮಾತಿದೆ
ನೀಳ ಹೆರಳಲು ಕನಸ ಹೆಣೆಯು
ತಂಪು ಬಾಳನು ಬಯಸಿ ತೂಗಿದೆ

—————————————-



ಮಾಲಾ ಚೆಲುವನಹಳ್ಳಿ

2 thoughts on “ಮಾಲಾ ಚೆಲುವನಹಳ್ಳಿ ಕವಿತೆ-ವಿವರ

Leave a Reply

Back To Top