ಮನ್ಸೂರ್ ಮೂಲ್ಕಿ ಕವಿತೆ-ಎಲ್ಲವೂ ಮಾಯಾ

ಬಾನನು ನೋಡುತ ನಗುವನು ಬೀರುತ
ಅಂಗಳದಲ್ಲಿ ಮಲಗಿಹೆ ನಾನು
ಚುಕ್ಕಿಗಳೆಲ್ಲವೂ ನನ್ನನು ನೋಡಲು
ಚಂದಿರ ನಗುವನು ಬೀರುವನು

ಚುಕ್ಕಿಗಳೆಲ್ಲವೂ ಒಂದೆಡೆ ಸೇರಲು
ಚಂದಿರ ಮೆಲ್ಲನೆ ಮುಳುಗುವನು
ಮೋಡದ ಮರೆಯಲಿ ಬೆಳಕನು ಕಾಣಲು
ನನ್ನೊಳ ನಗುವನು ಬೀರುವೆನು

ಬೆಳಕಿನ ಆಟವೊ ಮನಸ್ಸಿನ ಓಟವೂ
ಬಾನಲ್ಲಿ ಮೂಡುವ ಹಬ್ಬಗಳು
ಅಂಗಳ ಪೂರ್ತಿ ಬೆಳದಿಂಗಳ ಬೆಳಕು
ಕಡಲು ನದಿಯು ಭೂಮಿಯು ಹೊಳಪು

ಕುಣಿಯುವ ಚಂದಿರ ಚದುರುವ ಚುಕ್ಕಿ
ಸೂರ್ಯನು ಕೂಡಾ ನಾಚುವನು
ಕತ್ತಲೆಯೊಳಗೆ ಬೆಳಕಿನ ನೋಟವು
ಹಗಲಿಗೆ ಎಲ್ಲವು ಮಾಯವು.

Leave a Reply

Back To Top