ನಾನು ನಿಮಗೆ ಮತ ಕೊಟ್ಟಿದ್ದೇನೆ ನೀನು ನಮ್ಮ ಮಾತು ಕೇಳಲೇಬೇಕು.ವಿಶೇಷಬರಹ- ಸಿದ್ಧಾರ್ಥ ಟಿ ಮಿತ್ರಾ

“Man is a political animal ” ಎನ್ನುವ ಅರಿಸ್ಟಾಟಲ್ ಮಾತಿನಂತೆ ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ರೀತಿಯಲ್ಲಿ ರಾಜಕೀಯದಲ್ಲಿ ಭಾಗಿಯಾಗಿರುತ್ತಾನೆ. ಆದ್ದರಿಂದ ಪ್ರಜಾಪ್ರಭುತ್ವ ನಾಡಿನಲ್ಲಿ ವಾಸಿಸುವ ನಾಗರಿಕನಿಗೆ ರಾಜಕೀಯ ಜ್ಞಾನ ಬಹಳ ಅವಶ್ಯಕವಾಗಿದೆ.ಭಾರತ ಸಂವಿಧಾನವು ನಮ್ಮ ದೇಶದ ಕಾನೂನುಗಳ ಕೈಪಿಡಿಯಾಗಿದೆ.ಅದನ್ನು ಓದಿ ಅರ್ಥಮಾಡಿಕೊಂಡು ಅನುಸರಿಸುವದು ಪ್ರತಿಯೊಬ್ಬ ಭಾರತೀಯನ ಅದ್ಯಕರ್ತವ್ಯ.ಏಕೆಂದರೆ ನಾವು ಪ್ರಜಾಪ್ರಭುತ್ವದ ಮೂಲ ತತ್ವಗಳನ್ನು ಅರಿಯುವುದು, ಸಂವಿಧಾನದ ಮಹತ್ವ ನಾಗರಿಕರ ಹಕ್ಕು ಮತ್ತು ಕರ್ತವ್ಯಗಳನ್ನು ಹಾಗೂ ಸರ್ಕಾರದ. ಇತಿಮಿತಿಗಳನ್ನು ಮತ್ತು ನಾಗರಿಕರ ಪಾತ್ರವನ್ನು ತಿಳಿಯುವುದು ಬಹಳ ಮಹತ್ವದ್ದಾಗಿದೆ.1950ಕ್ಕಿಂತ ಮುಂಚೆ ಬ್ರಿಟಿಷರ ಆಡಳಿತದ ವ್ಯೆವಸ್ಥೆಯಲ್ಲಿ ಮತ ಚಲಾಯಿಸುವ ಹಕ್ಕು ಕೇವಲ ಕೆಲವರಿಗೆ ಮಾತ್ರ ಇತ್ತು ಹೆಚ್ಚಿನ ಪ್ರಜೆಗಳು ರಾಜಕೀಯ ಹಕ್ಕುಗಳಿಂದ ವಂಚಿತರಾಗಿದ್ದರು.ನಮ್ಮ ಸಂವಿಧಾನ ಜಾರಿಗೆ ಬಂದಾಗ ಸಂವಿಧಾನದ ನಿರ್ಮಾಪಕರು ಕೈಗೊಂಡ ದಿಟ್ಟ ಹೆಜ್ಜೆ ಎಂದರೆ ದೇಶದ 21 ವರ್ಷ ತುಂಬಿದ ಯುವ ಸಮುದಾಯಕ್ಕೆ ಜಾತಿ ಮತ,ಲಿಂಗ ಎನ್ನದೆ ಸಾಮಾಜಿಕ ಸ್ಥಾನಮಾನ ಮುಂತಾದವುಗಳ ಆಧಾರದ ಮೇಲೆ ತಾರತಮ್ಯವಿಲ್ಲದೆ ಮತದಾನದ ಹಕ್ಕನ್ನು ನೀಡಲಾಗಿದೆ.ಇದು ಪ್ರಜಾಪ್ರಭುತ್ವವನ್ನು ಬಲಪಡಿಸುವ ಕ್ರಾಂತಿಕಾರಕ ಹೆಜ್ಜೆಯಾಗಿದೆ. ಸಂವಿಧಾನವು 326 ನೇ ವಿಧಿಗೆ ತಿದ್ದುಪಡಿಯನ್ನು ತಂದು 1989 ರಿಂದ ಜಾರಿಗೆ ತರುವ ಮೂಲಕ ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಲಾಯಿತು.  ಮತದಾನ ಮಾಡುವುದು ನಮ್ಮ ಅತ್ಯಂತ ಜವಾಬ್ದಾರಿಯುತ ಕಾರ್ಯವಾಗಿದೆ.ಅದು ನಮ್ಮ ಸಂಪೂರ್ಣವಾದ ಹಕ್ಕು ಕೂಡ.ಸದ್ಯ ನಮ್ಮ ಪ್ರಜಾಪ್ರಭುತ್ವ ಆತಂಕಕಾರಿ ಸ್ಥಿತಿಯಲ್ಲಿದೆ.ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಮತದ ಹಕ್ಕನ್ನು ನಾವು ಸ್ಥಾಪನೆಗೊಳಿಸಲೇಬೇಕಾಗಿದೆ.ನಾನು ನಿಮಗೆ ಮತ ಕೊಟ್ಟಿದ್ದೇನೆ ನಿನು ನಮ್ಮ ಮಾತು ಕೇಳಲೇಬೇಕು ಎನ್ನುವುದು ಅವಶ್ಯಕತೆ ಇದೆ ಎನ್ನುವುದು ಗಟ್ಟಿ ಧ್ವನಿಯಲ್ಲಿ ಕೇಳುವುದಕ್ಕೆ ಮತ ಚಲಾಯಿಸಲೆಬೇಕು. ಅದಕ್ಕಾಗಿಯೇ ನಾನು ಪ್ರತಿ ಚುನಾವಣೆಯಲ್ಲೂ ಕಡ್ಡಾಯವಾಗಿ ಮತದಾನ ಮಾಡುತ್ತ ಬಂದಿದ್ದೇನೆ . ನಾನು ಈ ದೇಶದ ಪ್ರಮುಖ ಪ್ರಜೆ ಎಂದು ಸಾಬೀತು ಮಾಡಲು ಸಾಧ್ಯವಾಗುವುದು ನಾವು ನಮ್ಮ ಹಕ್ಕು ಚಲಾಯಿಸಿದಾಗಲೆ. ಮತದಾನಕ್ಕೆ ಅರ್ಹರಾದ ಯುವಜನತೆ ಮತದಾನದಿಂದ ದೂರವಾಗಬಾರದು.ರಸ್ತೆ ನೀರು, ವಿದ್ಯುತ್, ಮೂಲಸೌಕರ್ಯ, ಕಲ್ಪಿಸಿಲ್ಲವೇಕೆ  ಎಂದು ಕೇಳಲು ಮತದಾನ ಮಾಡಿರಬೇಕಾಗುತ್ತದೆ.  ಇದರ ಮಹತ್ವವನ್ನು ಪ್ರಾಥಮಿಕ ಶಾಲೇಯಿಂದಲೇ ಹೇಳಿಕೊಡಬೇಕು. ಈ ಹಕ್ಕು ಚಲಾಯಿಸದವರಿಗೆ ಸರ್ಕಾರಿ, ಖಾಸಗಿ ಹಾಗೂ ಯಾವುದೇ ಸೌಲಭ್ಯಗಳನ್ನು ಕೊಡುವುದಿಲ್ಲ ಎಂಬ ನಿಯಮ ಜಾರಿಗೊಳಿಸಬೇಕು.ಆಗ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುತ್ತಾರೆ. ಮತದ ಮಹತ್ವ, ಶ್ರೇಷ್ಠತೆ ಹಾಗೂ ಘನತೆಯನ್ನು  ಮನವರಿಕೆ ಮಾಡಿಕೊಡಬೇಕಾಗಿದ ಹಾಗೂ ಅದರ ಅವಶ್ಯಕತೆಯೂ ಇದೆ.ಅಂತೆಯೇ ಎಲ್ಲರೂ ಸಂವಿಧಾನವನ್ನು ತಿಳಿದುಕೊಳ್ಳಬೇಕು ತಿಳಿದು ಕೊಂಡು ಕಡ್ಡಾಯವಾಗಿ ಮತದಾನ ಮಾಡಬೇಕು.


Leave a Reply

Back To Top