ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ
ನೂರು ನಮನ
ಹೆಣ್ಣು ನಕ್ಕಾಗಲೆ ಅಲ್ಲವೇ
ಮೋಡ ಜಡೆ ಬಿಚ್ಚಿ
ಹೊಯ್ಯುವುದು ಮಳೆ
ಅವಳ ಮುಗುಳು ನಗೆ
ಮುಖದಲ್ಲಿ ಕಂಡಾಗಲೆ
ಭಯ ಭೀತಿಯ ಮೊಗ್ಗು
ಸಂತಸದಿ ಅರಳಿ ಹೂವಾಗುವುದು
ಅವಳ ಒಲುಮೆಯೆ
ಶಿವನ ಪ್ರಕಾಶ
ಹುಟ್ಟುವವು ನೂರು ಕನಸು
ಅವಳ ಮೃದು ಮನಸ್ಸು
ಅಂತೆಯೇ ಶರಣರು
ಸಾರಿ ಸಾರಿ ಹೇಳಿದರು
ಹೆಣ್ಣು ಹೆಣ್ಣಲ್ಲ ಹೆಣ್ಣು ಸ್ವತಃ
ಕಪಿಲ ಸಿದ್ಧ ಮಲ್ಲಿಕಾರ್ಜುನ
ಜಗವೇ ಮಣಿಯುವುದು
ಹೇ ತಾಯೆ ನಿನಗೆ
ಹಸಿರು ಹುಲ್ಲಿನ ನೆಲದೇವಿ
ನೂರು ನಮನ ನಿನಗೆ ಭೂರಮೆ
_________
ಡಾ ಶಶಿಕಾಂತ ಪಟ್ಟಣ ರಾಮದುರ್ಗ
ಸೂಪರ್
ಕವನ
ಹೆಣ್ಣು ನಕ್ಕಾಗ
ಅಕ್ಕಮಹಾದೇವಿ
ಅರ್ಥಗರ್ಭಿತವಾದ ಕವನ
ಸುಂದರವಾದ ಕವನ