ಕಾವ್ಯ ಸಂಗಾತಿ
ಕೆ.ಸಿ.ಮಮತ
ಹೆಣ್ಣು
ಹುಟ್ಟುವಾಗಲೇ ಒಳಗೊಂದು ತಾಯ್ತನ
ಬೆಳೆದಂತೆ ಮೈಗೂಡುತ್ತದೆ ಸಹನೆ
ಚೆಲುವೆ ಚತುರೆ ಮನ ತುಂಬಾ ಅಕ್ಕರೆ
ಮನೆ ಮನೆಗಳಿಗೆಲ್ಲ ಸಂತಸ ಹೆಣ್ಣು ನಕ್ಕರೆ
ಅಂತ: ಕರಣ ತುಂಬಿದ ಒಡಲು
ನಾಕ ನಾಚಿಸುವ ಮಡಿಲು
ಹೆಣ್ಣು ಪ್ರಕೃತಿಯ ಪ್ರತೀಕ
ಸೌಂದರ್ಯ ಸೊಬಗು ವರ್ಣತೀತ ಮಾನವ ಮೂಕ
ಎಲ್ಲವೂ ಹೆಣ್ಣೇ ನದಿ ಭೂಮಿ ವನ
ಶಾರದೆ ಸ್ವರೂಪ ಸಂಗೀತ ಗಾನ
ತ್ಯಾಗಕ್ಕೆ ಇನ್ನೊಂದು ಹೆಸರು ಈಕೆ
ತಾಳ್ಮೆ ಮೀರಿದರೆ ಚಂಡಿ ಚಾಮುಂಡಿ ಜೋಕೆ
ತಾಯಿ ಮಗಳು ಸೊಸೆ ಅತ್ತಿಗೆ ನಾದಿನಿ ಪತ್ನಿ ಅಕ್ಕ-ತಂಗಿ
ಎಲ್ಲಾ ಸ್ಥಾನಕ್ಕೂ ಅರ್ಹಳು ಬದುಕುವಳು ದುಃಖ ನುಂಗಿ
ಮನೆಯ ಯಜಮಾನಿ ದೇಶಕ್ಕೆ ಪ್ರಧಾನಿ
ಎಲ್ಲ ರಂಗದಲ್ಲೂ ಸಾಧನೆಗೈದ ಹೆಣ್ಣು ಸಾಧ್ವಿನಿ
ಹೆಣ್ಣಲ್ಲ ಅಬಲೆ ಈಕೆ ಜೀವಂತಿಕೆಯ ಸೆಲೆ
ಹೊಸ ಜೀವ ತರುವಳು ಭೂಮಿಗೆ ಕಟ್ಟಲಾಗದು ಬೆಲೆ
ಹೆಣ್ಣಿನ ಅಂತರಂಗವನ್ನು ಅರಿಯದವ ಮೂಢ
ಅವಳ ಜೊತೆಗೂಡಿ ಬಾಳುವವನ ಭಾಗ್ಯವ ನೋಡ
——————-
ಮಮತ