ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

೧) ಹೆಣ್ಣವಳು ದೇವತೆ
ಎಂದು ತುಳಿಯದಿರಿ
ಸರಿ ಸಮಾನಳೆಂದು
ಹೇಳಿ ಗೌರವಿಸಿರಿ

೨) ಹೆಣ್ಣವಳು ತ್ಯಾಗಿಯು
ತನ್ನತನ ಮರೆತು
ಮನವ ಅರಿವಳು
ಮನೆ ಬೆಳಗುವಳು

೩) ಹೆಣ್ಣು ಹುಟ್ಟಿತು ಎಂದು
ಹೀಗಳೆಯ ಬೇಡಿರಿ
ಮಗಳು ಭಾರವಲ್ಲ
ಮನೆ ಲಕ್ಷ್ಮಿಯವಳು

೪) ಹೆಣ್ಣಿದ್ದ ಮನೆ ಚಂದ
ಸಹನೆಗೆ ಮೂರ್ತಿಯು
ತವರು ಪತಿಮನೆಗೆ
ಹಾರೈಸಿ ಬಾಳುವಳು

೫) ಹೆಣ್ಣು ಹೆಮ್ಮಾರಿಯಲ್ಲ
ಸಹನೆಗೆ ಮೂರ್ತಿಯು
ಸಾಧನೆಗೆ ಕೀರ್ತಿಯು
ಹೆಣ್ಣು ನಂದಾದೀಪವು

೬) ತಾಯಿ ಮಮತೆಯಲಿ
ಮಿಂದು ನಡೆದವರು
ಸೋತಿಲ್ಲೆಂದು ತಿಳಿಯು
ಜಗವ ಗೆದ್ದಿಹರು

೭) ಅಕ್ಕತಂಗಿರು ಬೇಕು
ಬೆನ್ನು ಚಪ್ಪರಿಸಲು
ಅಣ್ಣತಮ್ಮರ ಏಳ್ಗೆ
ಕಂಡು ಹಿಗ್ಗುತಿರಲು.

೮) ಹೆಣ್ಣ ಗೌರವಿಸುತ
ಗೌರವ ಹೆಚ್ಚಿಸಿಕೊಳ್ಳಿ
ಸುಖಶಾಂತಿ ನಿಮಗೆ
ಬದುಕು ಸವಿಯಲು

೯) ಮನವ ಕದ್ದಿಹಳು
ಮನದಿ ನಿಂದಿಹಳು
ಮನೆಯ ಬೆಳಗಿಹಲು
ಭೂಮಿ ತೂಕದವಳು

೧೦) ಮುಗುದೆ ನನ್ನವಳು
ನಾಚಿ ನೀರಾಗಿಹಳು
ಪ್ರೀತಿಯ ಹೊಳೆಯಲಿ
ಮಿಂದೆದ್ದು ನಿಂತಿಹಳು.


About The Author

1 thought on “ಮಹಿಳೆ ಕುರಿತಾದ ತನಗಗಳು-ರೋಹಿಣಿ ಯಾದವಾಡ”

  1. ಯಾದವಾಡ. ಮೆಡಂ ಮಹಿಳಾ ವಿಚಾರವಾದಿಯಾದ ತಾವು ಸಂಗಾತಿಯಲ್ಲಿ ಮಹಿಳಾ ಕುರಿತು ಬರೆದ ಕವನ ಅದ್ಬುತ ಮತ್ತು ಅಮೋಘ,ವಾಸ್ತವ ಬದುಕಿಗೆ ಏಣಿಯಾಗಬಲ್ಲ ಅಂಶಗಳನ್ನು ಹತ್ತು ನುಡಿಯಲ್ಲಿ ಹಚ್ಚಿದ ಆರದ ಹಣತೆ ಪುರುಷ ಮಹನೀಯರಿಗೆ ತಲುಪಿಸಿದಿರಿ,ಮಹಿಳಾಮಣಿಗಳ ಗೌರವ ಯತಾಥ೯ವಾಗಿ ಪ್ರಕಾಶಿಸಿದಿರಿ ,,,,, ಚೆನ್ನಾಗಿ ಬಂದಿದೆ ವಂದನೆಗಳು

Leave a Reply

You cannot copy content of this page

Scroll to Top