ಮಕ್ಕಳ ಕವಿತೆ
ಮನ್ಸೂರ್ ಮೂಲ್ಕಿ
ಮಕ್ಕಳ ಕವಿತೆ
ಚೆಂಡು ಕಂಡು
ಬೆಕ್ಕು ಬಂದು
ಕಿತ್ತುಕೊಂಡಿತು
ಆಟ ನಿಂತು
ಆಳುವು ಬರಲು
ಪುಟ್ಟ ಸಿಟ್ಟುಗೊಂಡನು.
ಮತ್ತೆ ಚೆಂಡು
ಕೊಟ್ಟ ಬೇಕ್ಕು
ಪುಟ್ಟನಿಗೆ ನಗುವು ಮೂಡಿತು
ಪುಟ್ಟನೆಸೆದ ಚೆಂಡು
ಉರುಳಿ ಹೋಗಲು
ಬೆಕ್ಕು ಮತ್ತೆ ತಂದು ನೀಡಿತು
ಪುಟ್ಟ ಮತ್ತು ಬೆಕ್ಕು
ಚೆಂಡಿನಾಟ ಆಡಿಕೊಂಡು
ಆಟದಲ್ಲಿ ಗೆಳೆಯರಾದರು
ಆಟ ಒಂದೇ
ನೋಟ ಬೇರೆ
ಆಟ ಖುಷಿಯ ಕೊಟ್ಟಿತು.
———————-
ಮನ್ಸೂರ್ ಮೂಲ್ಕಿ