ಕಾವ್ಯ ಸಂಗಾತಿ
ಡಾ. ದಾನಮ್ಮ ಝಳಕಿ
‘ತನುವೆಂಬ ತೋಟ’
ತನುವೆಂಬ ತೋಟದಲ್ಲಿ
ಮನವೆಂಬ ಗುದ್ದಲಿ ಹಿಡಿದು
ಮೌಢ್ಯವೆಂಬ ಕಳೆಯನ್ನು ಕಿತ್ತಿ
ಕಾಯಕ ದಾಸೋಹ ಬೆಳೆ ಬಿತ್ತಿ
ಶರಣತ್ವ ಫಲದ ಪರಿ ನೋಡಾ
ತನುವೆಂಬ ತೋಟದಲ್ಲಿ
ವೈಜ್ಞಾನಿಕತೆಯ ಮೆಟ್ಟಿಲು ಏರಿ
ವೈಚಾರಿಕತೆ ಕಡುಗೋಲಿನಿಂದ
ಅರಿವಿನ ಅನುಭಾವ ಪಡೆದ
ನಿಜಶರಣನ ಪರಿ ನೋಡಾ
ತನುವೆಂಬ ತೋಟದಲಿ
ಲಿಂಗಬೇಧ ಕಳೆಕಿತ್ತಿ
ಜಾತಿಬೇಧ ಕಿತ್ತೊಗೆದು
ಸಮಸಮಾಜ ಕಟ್ಟುತಾ
ಇಷ್ಟಲಿಂಗ ನೀಡಿದ ಪರಿ ನೋಡಾ
ತನುವೆಂಬ ತೋಟದಲಿ
ಭಕ್ತಿಭಾವ ಎಂಬ ಬೆಳೆ ಬಿತ್ತಿ
ಪ್ರೀತಿಪ್ರೇಮದ ರಸದಲಿ
ಮನುಕುಲ ಒಂದೇ ಎನುವ
ಮಾನವೀಯತೆಯ ಪರಿ ನೋಡಾ
——————————————–
ಡಾ. ದಾನಮ್ಮ ಝಳಕಿ
ಅಕ್ಕಮಹಾದೇವಿ.
ಸೂಪರ ವಚನ