ವಸಂತ್. ಕೆ. ಹೆಚ್. ಅವರಕವಿತೆ-ಬದುಕೆ ಹೀಗೆ

ಸತ್ತಾಗ ಮಲಗುವುದು ಇದ್ದೆ
ಇದೆ, ಈಗ ಎದ್ದು ಬದುಕು,
ಬದುಕಿನ ಹೂರಣವ ಸವಿದು ಬದುಕು
ಬದುಕೆ ಹೀಗೆ ‘,ಬೇವು-ಬೆಲ್ಲ ||

ಬದುಕುವುದೆಂದರೆ ತುಳಿದು
ಬದುಕುವುದಲ್ಲ, ತಿಳಿದು ಬದುಕು
ಜೀವನದ ರಸಾಯನವ ಸವಿದು ಬದುಕು
ಬದುಕೆ ಹೀಗೆ’, ಕೊಂಚ ಸಿಹಿ-ಕಹಿ||

ಮಲ್ಲಿಗೆಯ ಹೂವಿನ ಹಾಗೆ ಬದುಕು,
ಹೊತ್ತಾರೆ ಅರಳಿ, ಇಳಿ ಸಂಜೆಗೆ
ಬಾಡುವ ಹಾಗೆ, ಅರಳಿ -ಬಾಡುವ
ಮುನ್ನ ನೆನೆಯುವರು
ನಿನ್ನ, ಮಲ್ಲಿಗೆ ಹೂವಿನಂತೆ
ಬದುಕೆ ಹೀಗೆ’, ಹೂವು-ಮುಳ್ಳು||
———————————

Leave a Reply

Back To Top