ಅಮೃತ ಎಂ ಡಿ ಕವಿತೆ-ಮಾಯೆ..

ಅದೆಷ್ಟು ಬಾರಿ ಸೋಲಲಿ ನಿನ್ನೆದುರು ನಿಂತು,
ಅದ್ಯಾವ ರಸ ಗಳಿಗೆಯೋ
ಬದುಕಿಗೆ ಬಂದು ಭದ್ರವಾಗಿ ಕುಳಿತೆ,
ಅಸಾಧ್ಯ ಎನಿಸುತ್ತದೆ ನಿನ್ನ ಮುಂದೆ ಸೋಲಲು
ಹಾಗೆಂದು ಸೋತಿಲ್ಲ ಎಂದಲ್ಲ,
ಸೋತಿರುವೆ, ಸೋಲುತ್ತಿರುವೆ
 ನಿನ್ನ ಗ್ರಹಿಕೆ  ದಕ್ಕಿಸದೆ,
ನಿನ್ನ ನಿಲುವಿಗೆ ಸಿಕ್ಕದೆ,

ಅದೆಷ್ಟು ಬಾರಿ ಗೆಲ್ಲುವೆ ಗೆದ್ದ ಹೃದಯವನ್ನೇ,
ನಿನ್ನ ಇರುಹಿನ  ಇರುವಲ್ಲಿ ಉಳಿದೆಲ್ಲವೂ ಗೌಣವಂತೆ

ಕಾರಣಗಳೇ ಇಲ್ಲ ನಿನ್ನ ವಿರುದ್ದ ಸಾಗಲು,ಆದರೂ ಸಾಗುತ್ತಿರುವೆ ಗಡಿ ಇಲ್ಲದ ಗಡಿ ದಾಟಲು
ಮನಸ್ಸು ಒಪ್ಪದೇ


,
ಸಣ್ಣ ನಿದರ್ಶನ ಕೂಡ ಇಲ್ಲ ನಿನ್ನ ನಿರೀಕ್ಷೆಯ ಊರನ್ನು
ನಿರ್ಲಕ್ಷಿಸಲು ,ಮುಂದೆ ಸಾಗಲು
ಆದರೂ ಸಾಗುತ್ತಿರುವೆ ನೀ ಇಲ್ಲದ ನಿಲ್ದಾಣ ತಲುಪಲು,
ನೀ ಇರದ ಜಾಗದ ಹುಡುಕಲು.

ಅದೆಷ್ಟು ಜನರ ನೋಡಿಲ್ಲ, ಅದೆಷ್ಟು ಒಂಟಿ ದಾರಿ ಕ್ರಮಿಸಿಲ್ಲ, ಅದೆಷ್ಟು ಅವತಾರಗಳ ಕಣ್ಣಾರೆ ಕಂಡಿಲ್ಲ..
ಅವೆಲ್ಲ ನಿದರ್ಶನದಕ್ಕು ವಿರುದ್ದ ದಿಕ್ಕಿನಲ್ಲಿ ಸಾಗುವ  ವ್ಯಕ್ತಿತ್ವ ನಿನ್ನದು ..


ಮತ್ತೆ ಮತ್ತೆ ಬಾಗುವೆ, ಕಳೆದು ಹೋಗುವೆ
ನಿಲುಕದ ಆ ವ್ಯಕ್ತಿ ಚಿತ್ರಕ್ಕೆ,
ಅಷ್ಟೇ ಜೋಪಾನವಾಗಿ ಕಾಪಿಡುವೆ
ಮನದ ಭಾವಗಳು ನಿನ್ನೆದೆಯ ಕಾವಾಟ ತಟ್ಟದಂತೆ,

ಮತ್ತೆ ಮತ್ತೆ ನಿನ್ನೂರಲ್ಲಿ ಪ್ರವಹಿಸುವೆ,
ನಿನ್ನ ಗಮನಕ್ಕೆ ದಕ್ಕದೇ
ಬಂದ ದಾರಿಯಲ್ಲಿ ಸಾಗಿ ಬಿಡುವೆ..

ಮತ್ತೆ ಮತ್ತೆ ನೀ ನಿಂತ ಜಾಗದಲ್ಲಿ,
ನೀ ನಡೆದ ಕ್ರಮಿಸಿದ ಹಾದಿಯಲ್ಲಿ ಸಾಗುವೆ,
ನನ್ನ ನೆರಳಿನ ಗಾಳಿ ಕೂಡ ನಿನ್ನ ಸೋಕದಂಗೆ
ಸಾಗಿ ಬಿಡುವೆ …

Leave a Reply

Back To Top