ಕಾಮನ ಬಿಲ್ಲಿನ ಮೇಲೆ ಕುಳಿತು
ಕನಸು ಕಾಣುವ ಪ್ರೀತಿ ನನ್ನದಲ್ಲ
ಇನಿಯನೇ…..

ಪ್ರೀತಿಯ ತೇರಲ್ಲಿ ಕುಳಿತು
ನನ್ನೊಡನೆ ಗೆಳೆಯ
ಮೆರವಣಿಗೆ ಹೊರಟರೆ
ಸಾಕು……

ಮೈಸೂರು ಮಲ್ಲಿಗೆಯ ಕಂಪು
ಇಲ್ಲದಿದ್ದರೇನಂತೆ
ಕಾಡುಸಂಪಿಗೆಯ ತಂಪು
ಜೊತೆಯಲ್ಲಿಯೇ ಇದ್ದರೆ
ಸಾಕು…..

ರಾತ್ರಿ ಬೆಳದಿಂಗಳಲಿ ಅರಳುವ
ಇರುಳ ಮಲ್ಲಿಗೆಯ
ತರದೇ ಇದ್ದರೆ ಏನಂತೆ..
ಹಗಲು ಸೂರ್ಯನ ಎದುರು
ಒರಗಲು ನಿನ್ನ ಹೆಗಲು
ನೀಡಿದರೆ ಸಾಕು…

ನನ್ನೇಲ್ಲ ಕವಿತೆಗಳ ನೀನು
ಓದದೇ ಇದ್ದರೆನಂತೆ
ನಾ ಬರೆವ ಸಾಲುಗಳಿಗೆ
ಪ್ರತಿಬಿಂಬವಾಗಿ ನಿಲ್ಲು
ಸಾಕು….

ಏನಿಲ್ಲದಿದ್ದರೇನು ಗೆಳೆಯ
ಸಾಕು…. ಸಾಕು ಎನಗೆ
ಒಂದಿಷ್ಟು ಹಿಡಿ ಮಲ್ಲಿಗೆ
ಪ್ರೀತಿಯ ದಾರದಲ್ಲಿ
ನಮ್ಮೊಲವ ಬದುಕ ಕಟ್ಟಲು……


Leave a Reply

Back To Top