ಕಥಾ ಬಿಂದು ಪ್ರಕಾಶನದ ಯಶೋಗಾಥೆ

ಪಿ. ವಿ. ಪ್ರದೀಪ್ ಕುಮಾರರವರ ಕನಸಿನ ಕೂಸೆ ಕಥಾಬಿಂದು ಪ್ರಕಾಶನವಾಗಿದೆ.   ಮೃದುಳ ಡೈರಿ, ಬಾಳೆ ತೂಗುಯ್ಯಾಲೆ, ಮರಣಶಾಸನ, ಚಂಡಮಾರುತ, ರಣವೀಳ್ಯ, ಸೂತ್ರದಾರ ಮೊದಲಾದ ಕಾದಂಬರಿಗಳನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದಾರೆ. ಇವು ಸಾಹಿತ್ಯಾಸಕ್ತರು ಓದಲೇ ಬೇಕಾದ ಸ್ವಾರಸ್ಯಕರ ಕನ್ನಡ ಕಾದಂಬರಿಗಳಾಗಿವೆ.
 ಸ್ವತಃ ಸಾಹಿತಿಯಾದ ಪ್ರದೀಪ್ರವರು 24/4/2007ರಲ್ಲಿ ಕಥಾಬಿಂದು ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಅವರದೇ ಮಾತಿನಲ್ಲಿ ಹೇಳುವುದಾರೆ ಆ ಸಂದರ್ಭದಲ್ಲಿ ಅವರ ಬಳಿ ಯಾವುದೇ ಹಣ ಬಲ ಜನ ಬಲ ಇರಲಿಲ್ಲ.ಆದರೂ ಪ್ರತಿ ವರ್ಷ ವಾರ್ಷಿಕೋತ್ಸವ ಆಚರಿಸಿಕೊಂಡು ಎಲೆಮರೆಕಾಯಂತಿರುವ ಬಹುಮುಖ ಪ್ರತಿಭೆಗಳನ್ನು ಗುರ್ತಿಸಿ ಪ್ರೋತ್ಸಾಹಿಸುತ್ತ ಬರುತ್ತಿದ್ದಾರೆ. ನಾನು ಗಮನಿಸಿರುವಂತೆ ಪ್ರದೀಪ್ ಸರ್ ಯಾವುದೇ  ಪ್ರಶಸ್ತಿಗೆ ಅವರು ಆಸೆ ಪಡದಿರುವ ಅಪರೂಪದ ವ್ಯಕ್ತಿತ್ವವುಳ್ಳವರು.ಎಲ್ಲವನ್ನು ಕನ್ನಡದ ಸೇವೆ ಮಾಡುತ್ತಿದ್ದಾರೆ.
   ಇತ್ತೀಚಿಗೆ 29/10/2023ರಂದು ಮಂಗಳೂರಿನ ಪುರಭವನದಲ್ಲಿ ಹದಿನಾರೆ ವಾರ್ಷಿಕೋತ್ಸವ ಆಚರಣೆಯ ಸಂಧರ್ಭದಲ್ಲಿ ಒಟ್ಟು 50 ಕೃತಿಗಳು ಪ್ರಕಟಿಸಿ ಬಿಡುಗಡೆ ಮಾಡಿದರು. ಆ ದಿನ ಕಾರ್ಯಕ್ರಮ ಮಂಗಳೂರಿನ ಪ್ರಮುಖ ಬೀದಿಯಲ್ಲಿ ಕವಿಮಿತ್ರರು ಮಂಗಳ ವಾದ್ಯದೊಂದಿಗೆ ತಮ್ಮ ಕೃತಿಯ ದೊಡ್ಡ  ಚಿತ್ರಪಟ ಹಿಡಿದು ಮೆರವಣಿಗೆ ಮಾಡಲಾಯಿತು. ನಂತರ ಭುವನೇಶ್ವರಿಗೆ ಪುಪಾರ್ಚನೆ ಮಾಡಿ ನಾಡಗೀತೆ ಹಾಡಿ ತಾಯಿ ನಮಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ಉದ್ಘಾಟನೆ ಮಾಡಿ ವಾಮನ್ ರಾವ್ ಬೆನಕಲ್ ಮೊದಲಾದ ಗಣ್ಯರ ಸಮ್ಮುಖದಲ್ಲಿ 50 ಕೃತಿಗಳ ಲೋಕಾರ್ಪಣೆ ಮಾಡಲಾಯಿತು. ನಂತರ ವಿವಿಧ ಕ್ಷೇತ್ರದ ಸಾಧಕರಿಗೆ ಚೈತನ್ಯಶ್ರೀ ರಾಜ್ಯ ಪ್ರಶಸ್ತಿ ಕೊಟ್ಟು ಸನ್ಮಾನಿಸಲಾಯಿತು. ನಂತರ ಕವಿಗೋಷ್ಠಿ, ಸಂಸ್ಕೃತಿಕ ಕಾರ್ಯಕ್ರಮ ಎಲ್ಲವು ಅದ್ದೂರಿಯಾಗಿ ಆಚರಿಸಿ ಕರುನಾಡಲ್ಲಿ ದಾಖಲೆ ಮಾಡಿತು.


     ಇದಾದ ಕೇವಲ ಮೂರು ತಿಂಗಳ ಅಂತರದಲ್ಲಿ 21/12023ರಲ್ಲಿ ಕಥಾಬಿಂದು ಸಾಹಿತ್ಯ ಸಮ್ಮೇಳನವನ್ನುಕಥಾ ಬಿಂದು ಸಂಸ್ಥಾಪಕರಾದ .ಪಿ.ವಿ ಪ್ರದೀಪ್ ಕುಮಾರ್ ರವರ ಸಾರಥ್ಯದಲ್ಲಿ ಆಚರಣೆ ಮಾಡಲಾಯಿತು.ಶ್ರೀ ರಾಮನ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ, ಕಥಾ ಬಿಂದು ಪ್ರಕಾಶಕರಾದ ಪ್ರದೀಪ್ ರವರು ಎಲ್ಲರನ್ನು ಸ್ವಾಗತ ಮಾಡಿದರು.ಗಾಯಿತ್ರಿ ಸುರೇಂದ್ರಅಧ್ಯಕ್ಷತೆ , ವಿನೋದಿನಿ ಆನಂದ್, ಆನಂದ್ ಕೊರಟಿ, , ಡಾ.ಕೊಳಚೆಪ್ಪೆ ಗೋವಿಂದ ಭಟ್ಟರು,ಸತ್ಯ ವತಿ ಭಟ್ ವಾಮನ್ ರಾವ್ ಬೆನಕಲ್,ಡಾ ರವೀಂದ್ರ, ಸಿ. ಎನ್ ಉಮೇಶ್,ಪುಷ್ಪ ರಾಮೇಗೌಡ,ಭವ್ಯ ಸುಧಾಕರ್ ಜಗಮನೆ, ಆಶಾ ಶಿವು,ಭಾರ್ಗ ವಿ  ಮೊದಲಾದ ಗಣ್ಯರಿಂದ 52 ಲೇಖಕರ ಪುಸ್ತಕ ಅನಾವರಣಗೊಳಿಸಲಾಯಿತು.
ನಂತರ ವಿವಿಧ ಕ್ಷೆತ್ರದಲ್ಲಿ ಸಾಧನೆ ಮಾಡಿದ 30ಸಾಧಕರಿಗೆ ಕನ್ನಡತಿಲಕ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶ್ರೀಮತಿ ಭವ್ಯ ಸುಧಾಕರ ಜಗಮನೆಯವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ಸುನೀತಾ ನೆಲ ಗದ್ದೆ, ಸುಭಾಶಿಣಿ ಚಂದ್ರ, ತ್ಯಾಗರಾಜ್ ಮೊದಲಾದವರು ಸಂಸ್ಕೃತಿಕ ಕಾರ್ಯಕ್ರಮದ ಮೂಲಕ ರಂಜಿಸಿದರು. ಪುಸ್ತಕ ಬಿಡುಗಡೆ ಸಂಧರ್ಭದಲ್ಲಿ ಕೃತಿ ಕರ್ತೃ ಗಳ ಬಂಧು ಮಿತ್ರರಿಗೂ ಅಚ್ಚುಕಟ್ಟಾದ ವೇದಿಕೆ ಕಲ್ಪಿಸಿಕೊಡಲಾಯಿತು. ಅಪೂರ್ವ ಕಾರಂತ್ ಮತ್ತು ದೀಪ ಶಣಯ್ ಸುಶ್ರಾವ್ಯ ನಿರೂಪಣೆ ಮಾಡಿದರು. ಎಲ್ಲರು ಈ ಸಂತಸದ ಕ್ಷಣವನ್ನು ಕಣ್ ಮನ ತುಂಬಿಕೊಂಡು ಆನಂದಿಸಿದರು. ಕವಿಮಿತ್ರರು ಸಕ್ರಿಯವಾಗಿ ಸಹಕರಿಸಿ  ಕನ್ನಡ ಸೇವೆಯನ್ನು ಮಾಡಿದ್ದಾರೆ.
ಭಗವಂತನ ಕೃಪೆಯಿಂದ ಹಾಗೂ ಪ್ರದೀಪ್ ಸರ್ ಸಾರ್ಥಕ ಅವಿರತ ಶ್ರಮದಿಂದ ಆ ದಿನ ಕಥಾ ಬಿಂದು ಸಾಹಿತ್ಯ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳು ಸುಲಲಿತವಾಗಿ ಯಶಸ್ವಿಯಾಯಿತು.
ಇಂತಹ ಅದ್ಭುತ ಕಾರ್ಯಕ್ರಮಗಳ ಮೂಲಕ ಯಶಸ್ಸಿನ ಮೈಲುಸಾದಿಸುತ್ತಿರುವ ಪ್ರದೀಪ್ ರವರಿಗೆ ಅನಂತ ಅಭಿನಂದನೆಗಳು.ಹಾಗೆ ಸಹಕರಿಸುತ್ತಿರುವ ಶ್ರೀಮತಿ ಸುನೀತಾ ಪ್ರದೀಪ್ ಕುಮಾರ್ ಮತ್ತು ಮುದ್ದು ಮಕ್ಕಳಾದ ಅಮೋಘ ಮತ್ತು ಹರ್ಷರವರಿಗೆ ಧನ್ಯವಾದಗಳು.
ಕಾರ್ಯಕ್ರಮಕ್ಕೆ ಬಂದಿದ್ದ ಎಲ್ಲರಿಗೂ ಮತ್ತು ಅನುಪಸ್ಥಿಯಲ್ಲಿ ಶುಭಾಶಯಗಳು ಕೋರಿದ ಸರ್ವರಿಗೂ ಆತ್ಮೀಯ ವಂದನೆಗಳನ್ನು ಸಲ್ಲಿಸುತ್ತೇನೆ.
 ಕಥಾ ಬಿಂದು ಪ್ರಕಾಶನದಿಂದ ಸಾಕಷ್ಟು ಸಾವಿರಾರು ಪುಸ್ತಕ ಪ್ರಕಟಣೆಗೊಂಡು ಕನ್ನಡ ಸಾರಸ್ವತ ಲೋಕ ಅಕ್ಷಯವಾಗಿ ತುಂಬುತ್ತಿರಲಿ. ಪ್ರದೀಪ್ ಸರ್ ಕನ್ನಡ ಕೈಂಕರ್ಯ ಅಜರಾಮರವಾಗಿ ಉಳಿಯಲಿ ಎಂದು ಅದೇವರಲ್ಲಿ ಪ್ರಾರ್ಥಿಸುತ್ತೇನೆ.
 ನಾವೆಲ್ಲಾ ಸೇರಿ ಭುವನೇಶ್ವರಿಯ ತೇರನ್ನು ಸಂಭ್ರಮದಿಂದ ಚಿರಂತನ ಎಳೆಯೋಣ. ಕನ್ನಡವ ಬಳಸುತ್ತ ಬರೆಯುತ್ತ ಬೆಳೆಸುತ್ತ ಬೆಳಗಿಸುತ್ತಿರೋಣ…..


Leave a Reply

Back To Top