ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಬೆಳವಲದ ಒಕ್ಕಲತಿ

ಬೆಳವಲದ ಒಕ್ಕಲತಿ
ಹಿಂಗ್ಯಾಕ ನಿಂತಿ
ಭಾವದ ಬುತ್ತಿ
ನಿನಗ ತರಲೇನು

ಎನ್ನೆದೆಯ ಗೆಳತಿ
ಒಡಲಾಳದ ಪ್ರೀತಿ
ನಿನ್ನಂಗಳ ಹಣತಿಗೆ
ಎಣ್ಣೆ ಸುರಿಲೇನು

ಜೀವನದ ಜೊತೆಗಾತಿ
ಎರೆ ಹೊಲದ ಒಡತಿ
ಬಿಳಿ ಜೋಳದ ತೆನಸಿ
ನಿನಗೆ ಹುರಿಲೇನ

ಮಾವಿನ ತೋಪಿನ
ತನ್ನೆರಳು ತಂಪಿನ
ಕಳ ಕಂಠದ ಕೋಗಿಲೆ
ಧ್ವನಿ ಎತ್ತಿ ಮತ್ತೆ ಹಾಡದೇನ

ಗೊಡಚಿಯ ಜಾತ್ರೆಯಲಿ
ನೀರಿಗೆ ಉಟ್ಟವಳು
ಕ್ಯಾದಗಿ ನಾಗರ ಜಡೆಯವಳು
ನನ್ನವಳು ಚೆಂದ ನಮ್ಮನಿಗೆ

ಬ್ಯಾಸಗಿ ದಿನದಾಗ
ಬಲು ಡವಲು ಗೂಡು
ನನ್ನವಳ ಜೀವ
ನನ್ನ ಜೋಡು


6 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ-ಬೆಳವಲದ ಒಕ್ಕಲತಿ

  1. ಜಾನಪದದ ಸೊಗಡು… ಪ್ರಕೃತಿಯ ಸಿರಿ ಸಂಪತ್ತು…. ಸುತ್ತಲಿನ ಪರಿಸರದ ಘಮ… ಎಲ್ಲವೂ ಹದವಾಗಿ ಬೆರೆತು ಕವನದಲ್ಲಿ ಒಡಮೂಡಿದ ರೀತಿ…ಮೆಚ್ಚುವಂತಹದು

    ಸುಶಿ

  2. ಜಾನಪದದ ಸೊಗಡು… ಸುತ್ತಲಿನ ಪರಿಸರದ
    ವರ್ಣನೆ… ಪ್ರಕೃತಿಯ ಸಿರಿ ಸಂಪತ್ತು… ಎಲ್ಲವೂ ಹದವಾಗಿ ಬೆರೆತು ಕವನ ಒಡಮೂಡಿದ ರೀತಿ
    ಮೆಚ್ಚುವಂತಹುದು..

    ಸುಶಿ

  3. ತುಂಬಾ ಚೆನ್ನಾಗಿದೆ ನಿಮ್ಮ ಕವನ ಸರ್

  4. ಎದೆಯಾಳದ ಪ್ರೀತಿ…ಹೊರಹೊಮ್ಮಿದ ಪ್ರೀತಿ… ಬೆಳವಲದ ಒಕ್ಕಲತಿ…. ಕ್ಯಾದಗಿ ನಾಗರ ಜಡೆಯ ಮನ ಬೆಳಗಿದ ಗೆಳತಿ…. ನಿಮ್ಮ ಮನೆಯ ಚೆಂದವಾದ ಒಡತಿ….ಹಳ್ಳಿ ಭಾಷಾ ಸೊಗಡಿನಲ್ಲಿ ಅರಳಿದ ಭಾವ ….ಹೃದಯ ಸೂರೆಗೊಂಡ ಭಾವ ಜೀವ ಕವನ ಮಲ್ಲಿಗೆ….
    — *ಇಂದಿರಾ ಮೋಟೆಬೆನ್ನೂರ. ಬೆಳಗಾವಿ*

  5. ಮನದಾಳದ ಪ್ರೀತಿ ಪ್ರಕೃತಿಯ ಸೌಂದರ್ಯ ಎಲ್ಲವೂ ತಮ್ಮ ಕವನದಲ್ಲಿ ನೈಜ ರೂಪದಲ್ಲಿ ಮೂಡಿದೆ. ಆಕರ್ಷಣೀಯವಾಗಿದೆ….. ಹಳ್ಳಿಯ ಸೊಗಡು ಅದ್ಭುತ

    ಅಕ್ಕಮಹಾದೇವಿ ತೆಗ್ಗಿ

Leave a Reply

Back To Top