ಕಾವ್ಯ ಸಂಗಾತಿ
ಸುಜಾತಾ ರವೀಶ್
ಗಜಲ್
ಹಾರುವ ಮಿಡತೆ ನೋಡುತ ಆಸೆಗಳ ಕುದುರೆ ಏರಿದೆಯಾ ನೀನು
ಹಾಡುವ ಹೃದಯ ರಾಗಕೆ ಆಗಸದ ಅಂಗಳಕೆ ಹಾರಿದೆಯಾ ನೀನು
ಬಾಳಿದು ಬರಿಯ ಸುಖದ ಪಲ್ಲಂಗ ಅಲ್ಲ ತಿಳಿದಿರಬೇಕು
ನಾಳಿನ ಚಿಂತೆ ಮರೆತು ಸಂತಸ ನಲಿವು ಮೆರೆದೆಯಾ ನೀನು
ಮಳೆಯ ಬಿಲ್ಲದು ಬರುವುದು ಚಿಂತೆಯ ನಾಲ್ಕು ಹನಿ ಸುರಿದರೆ ತಾನೆ
ಹೊಳೆವ ಮಿಂಚಿನ ಕಾಂತಿಗೆ ಕತ್ತಲ ಭಯ ನೀಗಿದೆಯಾ ನೀನು
ಬದುಕ ಸಂತೆಗೆ ಭಾವನೆ ಬಿಕರಿಯ ಸರಕು ಆಗಿ ಹೋಗಿದೆ ನೋಡು
ಬೆಳಕ ಪ್ರವೇಶ ಆಗುವ ಮೊದಲೇ ನೇಪಥ್ಯಕೆ ಸರಿದೆಯಾ ನೀನು
ದೀಪದ ಪತಂಗ ರೆಕ್ಕೆಯ ಸುಟ್ಟುಕೊಳ್ಳುವುದು ತಾನಾಗಿ ತಾನು
ಪಾಪದ ಸಂಸರ್ಗ ಕಳೆದು ಸನ್ಮಾರ್ಗಕೆ ಸುಜಿಯ ಕರೆದೆಯಾ ನೀನು
ಸುಜಾತಾ ರವೀಶ್
ಪ್ರಕಟಣೆಗಾಗಿ ಅನಂತ ಧನ್ಯವಾದಗಳು.
ಸುಜಾತಾ ರವೀಶ್
ಚನ್ನಾಗಿದೆ… ಶುಭೋದಯ ಕವಯತ್ರಿ
ಶರಣಾರ್ಥಿ..!
ಅರ್ಥಪೂರ್ಣ.