ಇಮಾಮ್ ಮದ್ಗಾರ ಹೊಸ ಕವಿತೆ -ಸುಮ್ಮನೆ

೧ )
ಮನದಾಳೆಯಲಿ ಬರೆದ
ಓಲೆಯ ಅಳಿಸಲಾದೀತೇ ?
ಬೆಸೆದ ಜೀವ ಕರ್ಪಣೆಯಾದ ಭಾವವ ಮರೆಯಲಾದೀತೇ ?

೨)
ವರುಷದಲಾರು ಸಲ
ಋತುಗಳೇ…
ಬದಲಾಗುವವು ನೀನು….
ಬದಲಾಗುವದರಲ್ಲಿಲ್ಲೇನೂ
ಅಚ್ಚರಿ !

೩)
ತುಗ್ಗಲಿ ಕಟ್ಟಿಗೆ ಒಲೆಯಲಿ
ಛಡಾಳಿಸಿದರೇ‌‌‌…
ಹೆಂಚಿನ ಮೇಲೆಯ ನಿನ್ನ
ರೊಟ್ಟಿಗೇಕೆ ಚಡಪಡಿಕೆ ?

೪)
ತಾಸುಗಟ್ಟಲೇ ಪೋನ್ಯಾಗ
ವಟಗುಟ್ಟಿದರೆ
ಹಚ್ಚಿದ ಒಲ್ಯಾಗ ಹತ್ತಿ
ಕಟಗಿ ಮಾತಾಡಿದಂಗ ನೆಪ್ಪಿರಲಿ ನ್ಹೂ…

೫)
ಹಳೆಬಳ್ಯಾಗ ಹೊಸ ಹೂವ್ವ
ಹೊಸ ಹೂವಿನದಳದ ಮ್ಯಾಲ ಅದಾ ಹಳೇ ಇಬ್ಬನಿ
ಹೊಸದಾಗಿ ಮುತ್ತಿಟ್ಟಂಗ
ಈ ಹೊಸ ವರುಷ !

೬)
ಹಳೇ ಸಾಗರ ಹೊಸ ನೀರು
ದಡ ಹಳೆದಾದರೂ…
ಮುತ್ತಿಡುವ ಅಲೆ ಹೊಸದು
ಅದಕ್ಕೂ ಹಳೆಯ ಸಾಗರ
ಸೇರುವಾಸೆ !

೭)
ಜಗತ್ತಿನನೇಕ ಪ್ರಶ್ನೆಗಳಿಗೇ..
ಈ ವಿಜ್ಞಾನ್ಯುಗದಾಗ…..
ಉತ್ತರ ಸಿಕ್ಕಿಲ್ಲ ! ಅಂದಾಗ
ನನ್ನ ಪ್ರಶ್ನೆಗುತ್ತರ ಸಿಕ್ಕಿತಾ….
ನಿನ್ನೆದಿಯ ಸಣ್ಣ ಕಿಂಡ್ಯಾಗ ??

೮)
ನೀನು ಬಿಟ್ಟೋಗುವ ಮುಂಚೆ ಕನಸ್ನ್ಯಾಗಾದರೂ…
ಮುಟ್ಟಿಬಿಡು ಒಮ್ಮೆ !
ಬಿಟ್ಟೋದ ಮ್ಯಾಲಿನ ಸುದ್ದಿ
ನಿನಗ್ಯಾಕ..?

ನೆಪ್ಪಿರಲಿ !
ಹಸಿದವನಿಗಳಸಿದನ್ನ
ಅಮೃತ !!


Leave a Reply

Back To Top