ಕಾವ್ಯಸಂಗಾತಿ
ಮಾಲಾ ಚೆಲುವನಹಳ್ಳಿ
ಓರೆ ನೋಟದಿಂದ
ನನ್ನ ಸೆಳೆದೆಯಲ್ಲ ನಲ್ಲ
ಬಾರಿ ಬಾರಿ ತಿರು ತಿರುಗಿ ನೋಡುತಲಿ
ವಾರೆ ನೋಟದಿಂದ ನನ್ನ ಸೆಳೆದ ನಲ್ಲ ನೀನಲ್ಲವೇ
ಜರಿವ ಜಗದ ನಡುವಲೆನ್ನ ಪಥಕೆ ಹೂವ
ಸುರಿದು ನಡೆಮುಡಿಯ ಹಾಸಿದವನಲ್ಲವೇ
ಹರವಾದ ಎದೆಮೇಲೆ ನನ್ನ ಚಿತ್ತಾರವನ
ಭರದಿಂದ ಬಿಡಿಸಿ ನಿಡುಸುಯ್ದವನು
ಕರಗಳ ಚಾಚಿ ಬರಸೆಳೆದು ಅಪ್ಪುತಲೆನ್ನ
ಸರಸ ಸಲ್ಲಾಪಕೆ ಮುನ್ನುಡಿ ಬರೆದವನು
ಸುಂದರ ಸರೋವರದಲೆದ್ದ ತರಂಗಗಳಂತೆ
ಮಂದಾರ ಕುಸುಮದೊಲು ಮೊಗವರಳಿರಲು
ನಂದನವನದಲಿ ಪಸರಿಸಿಹ ಗಂಧ ಸುಗಂಧವು
ಚಂದನವ ತೇಯ್ದು ಸಾರ್ಥಕ್ಯ ಪಡೆದಂತೆ
ನಿನ್ನಂತರಂಗಲಿಹ ಆ ಅಪರಿಮಿತ ಒಲವ
ಎನ್ನಂತರಂಗ ಸೆಳೆದಿರುವ ಆಯಸ್ಕಾoತತೆ
ಕನೈದಿಲೆಯಂತೆ ನಾಚಿ ನೀರಾದ ಕಪೋಲವ
ಕಣ್ಣ ಕಾಂತಿಯೊಡೆ ಬಯಸುತಿದೆ ಏಕಾಂತತೆ
ಮಾಲಾ ಚೆಲುವನಹಳ್ಳಿ
ಕವನದ ಉದ್ದೇಶ ಈಡೇರಿದೆ
ಜಿ.ಎಸ್.ಪ್ರಕಾಶ್,ಬೆಂಗಳೂರು
ಚಂದದ ಕವಿತೆ