ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಹೇಳಿ ಹಗುರಾಗುವ ಕನವರಿಕೆ”

.

ನನ್ನ ಕನಸೇನಿದ್ದರೂ
ಕಪ್ಪು ಹಲಿಗೆ
ಬಿಳಿ ಬಳಪ
ಕೇಳುವ ಕಿವಿಗಳು
ಹೇಳಿ ಹಗುರಾಗುವ ಮನಸ್ಸು

ಮತ್ತೆ ಮತ್ತೆ
ಹೇಳುವ-ಕೇಳುವ
ತಿಳಿಯುವ-ತಿಳಿಸುವ
ಈ ಆಟ
ನನ್ನಿಚ್ಛೆಯದು….
ಮನಕೆ ಮುದನೀಡಿ
ನನಗ ನಾನೇ
ಬೆನ್ನಿಗೆ ಭೇಶ್ ಹೇಳಿಕೊಂಡ
ಸಂತೃಪ್ತ ಭಾವದ ನಡಿಗೆ…

ಈ ಕಾಯಕಲ್ಪದ ದಾರಿಗೆ
ದಶಕ ದಾಟಿದ ಉಮೇದು
ಅದೇ ಕನವರಿಕೆಯಲ್ಲಿಯೇ
ಇದ್ದೇನೆ ಈಗಲೂ

ಮತ್ತೆ ಮತ್ತೆ
ಚೌಕಾಸಿ ಮಾಡದಿರಿ
ಯಾವ ಭದ್ರತೆಯ ಬುನಾದಿಯೂ
ಬೇಕಿಲ್ಲ!

ಹೇಳಿ ಹಗುರಾಗುವುದರಲ್ಲಿರುವ
ಸುಖ ಮತ್ತೆಲ್ಲಿಯೂ ಇಲ್ಲ
ಇದೇ ನನ್ನ ಕನಸು.


4 thoughts on “ಡಾ. ಸುಮಂಗಲಾ ಅತ್ತಿಗೇರಿ ಅವರ ಕವಿತೆ “ಹೇಳಿ ಹಗುರಾಗುವ ಕನವರಿಕೆ”

    1. ಒಳ್ಳೆಯ ಕವಿತೆ.

      ಅತ್ಯಂತ ಸೂಕ್ಷ್ಮವಾಗಿ, ಧ್ವನಿಸುವ ಕವಿತೆ

  1. “ಹೇಳಿ ಹಗುರಾಗುವುದರಲ್ಲಿರುವ
    ಸುಖ ಮತ್ತೆಲ್ಲಿಯೂ ಇಲ್ಲ” ಎಷ್ಟೊಂದು ಸತ್ಯ. ಸುಂದರವಾದ ಕವಿತೆ…

Leave a Reply

Back To Top