ಮಾಜಾನ್ ಮಸ್ಕಿ-ಓ!! ಭಾವವೇ- ಲಹರಿ

ನಿನಗೊಂದು ನೆಲೆ ಇದೆಯೇ? ಭಾವ ಬಿಟ್ಟೆನೆಂದರೆ ಬದುಕಿಲ್ಲ, ಹಿಡಿದೇನೆಂದರೆ ಬೆಲೆ ಇಲ್ಲ. ಕುಹಕಿಗಳಲ್ಲಿ ಸಿಲುಕಿ ನಲುಗಿದೆ ಅದೇಕೋ.

ಭಾವನೆಗಳಿಲ್ಲದ ಬದುಕು ಒಂದು ಬದುಕೇ… ಇಂತಹ ಬದುಕಿನಲ್ಲಿ ಸ್ವಾರಸ್ಯ ಮೂಡುವುದೇ. ಸುಂದರ ಸಂಜೆಗೆ ನೈದಿಲೆ ಅರಳಿ ನಗುತಿರೆ, ಸುಮಧುರವಾದ ಸಂಗೀತಕ್ಕೆ ತಲೆದೂಗುವುದು ಭಾವವೇ. ಕಣ್ಣೀರ ಜಡೆಮಳೆಗೆ ದಯೆ ಇಲ್ಲದ ಮನಗಳು ಕರಗುವುದೇ? ಚೆಲ್ಲಾಟವೊಂದೇ ಇವರ ಮನಕ್ಕೆ ಅಂಟಿದ ರೋಗ, ಕಠೋರತೆಯೇ ಹೃದಯಕ್ಕೆ ಆಧಾರ.

ಕ್ಷಣಕ್ಕೊಂದು, ನಿಮಿಷಕ್ಕೊಂದು ಬಣ್ಣ ಬದಲಿಸುವವರಲ್ಲಿ ನಿಜದ ಬಣ್ಣ ಅರಿಯುವ ವ್ಯರ್ಥ ಪ್ರಯತ್ನದಲ್ಲಿ ಸಮಯ ಹಾಳು ಮಾಡಿಕೊಳ್ಳುವುದು ಬೇಕಾಗಿಲ್ಲ. ಯಾಕೆಂದರೆ ಮೌನದಲ್ಲಿ ಶಕ್ತಿ ಇದೆ, ಒಂಟಿತನದಲ್ಲಿ ಧೈರ್ಯ ಇದೆ. ಸಾಗುತ್ತಿರಬೇಕು ಸಾಧನೆಯ ಹಾದಿಯಲ್ಲಿ ಜಯ ಸಿಗುವ ಸಮಯದಲ್ಲಿ ಜಯ ಸಿಕ್ಕೇ ಸಿಗುತ್ತದೆ.

ದಟ್ಟ ಅಡವಿಯ ಕಾಡ್ಗಿಚ್ಚಿನಲ್ಲೂ ಸುಂದರ ಕಾಡುಮಲ್ಲಿಗೆ ಅರಳಿ ನಗುತ್ತಿರುವುದು ಯಾರಿಗೋಸ್ಕರ?! ಯಾರಿಗೆ ಬೇಕಿದ್ದರೂ ಬೇಡವೆಂದರೂ ಬದುಕಬೇಕಿದೆ ಜಗದಲ್ಲಿ ಇನ್ನೊಬ್ಬರ ಹಂಗನ್ನು ತೊರೆದು.


Leave a Reply

Back To Top