ಹಾ ಮ ಸತೀಶ ಅವರ ಗಜಲ್

ಕುಡಿಯ ಬೇಡ ನೀನು ಎನುತ ಕುಡಿದು ಬೀಳುತ್ತಾರೆ
ಹೊಡೆಯಬಾರದೆನ್ನುವರೆ ಹೊಡೆದು ಸಾಗುತ್ತಾರೆ

ಚಿಪ್ಪಿನೊಳಗೆ ಮುತ್ತುಇಹುದೆ ಮತ್ತು ಸಿಗದೆ ಹೇಳು
ಬದುಕಬಾರದೆನ್ನುವರೆ ದುಡಿದು ಬಾಳುತ್ತಾರೆ

ಸ್ನೇಹದೊಳಗೆ ವಿಷವು ಇರಲು ಪ್ರೀತಿಯಿಲ್ಲಿ ಕಂಡಿತೆ
ಕಡಿಯಬಾರದೆನ್ನುವರೆ ಕಡಿದು ಮೆರೆಯುತ್ತಾರೆ

ಬೆತ್ತಲಾದ ಜನರ ಸುತ್ತ ಹೊಸತು ವರುಷ ಹರುಷವು
ಹಡೆಯಬಾರದೆನ್ನುವರೆ ಮಡಿದು ಸಾಯುತ್ತಾರೆ

ಬಂಧನದ ಬೇಡಿಗಳನು ಕಳಚಲಿಂದು ಬರುವ ಈಶಾ
ಪಡೆಯಬಾರದೆನ್ನುವರೆ ನುಡಿದು ಬಳಸುತ್ತಾರೆ


3 thoughts on “ಹಾ ಮ ಸತೀಶ ಅವರ ಗಜಲ್

  1. ಸುಂದರ ಗಝಲ್ ಸಾಲುಗಳು
    ಪ್ರತಿ ಸಾಲಿನಲ್ಲೂ ಸಮ ಪದ ಇಲ್ಲ
    ಆರು ಪದ, ಮೂರು ಪದಗಳು ಇವೆ
    ಪ್ರತಿ ಸಾಲಲ್ಲಿ minimum ೫ ಪದ ಇದ್ದರೆ ಗಝಲ್ ಗೆ ಶೋಭೆ.. ಆದಿ ಪ್ರಾಸ ಇದ್ದರೆ ಗಝಲ್ ಮೆರುಗು ಹೆಚ್ಚುತ್ತೆ..
    ನನ್ನ ಅನಿಸಿಕೆ…..

    1. ಮಾತ್ರಾ ವಿಂಗಡಣೆಯ ಪ್ರಕಾರ ಗಝಲ್ ರಚಿಸುವಾಗ ಸಮ ಸಾಲಿಗೆ ಹತ್ತಿರವಾಗಿ ಗಝಲ್ ಬರೆಯುವುದು ಕಷ್ಟವಾಗುತ್ತದೆ.ಇಲ್ಲಿ ಹಾಗೆ ತರಲು ಪ್ರಯತ್ನಿಸಿರುವೆ . ಜೊತೆಗೆ ಸಮ ಪದಗಳು ಸಹ. ಅಲ್ಲಿ ಮಾತ್ರಾ ವಿಂಗಡಣೆ ಮುಖ್ಯವೆನಿಸುತ್ತದೆ. ಗಝಲ್ ಇದಕ್ಕೆ ನನ್ನ ಪ್ರಕಾರ ಆದಿ ಪ್ರಾಸವಿಲ್ಲ. ಆದರೆ ಕೆಲವು ಗಝಲ್ ಬರೆಯುವವರು ಬರೆದಿರುವುದನ್ನು ಗಮನಿಸಿರುವೆ. ಹಾಗೆ ಚೋಟಿ ಗಝಲ್, ಬಡಾ ಗಝಲ್ ಎಂದೂ ಪ್ರಕಾರಗಳಿವೆ. ಇದನ್ನು ಗಝಲ್ ಲಯದಲ್ಲಿ ಚೆನ್ನಾಗಿ ಹಾಡುವವರು ಹಾಕಬಹುದು.

      ತಮ್ಮ ಮನದಾಳದ ಅನಿಸಿಕೆ ಧನ್ಯವಾದಗಳು ಸರ್
      ಹಾಗೆ ಹದಿನಾಲ್ಕು ಹದಿನೈದು ಮಾತ್ರಾ ವ್ಯಾಪ್ತಿಯಲ್ಲಿ ಬರೆದ ಗಝಲ್ ಶ್ರೇಷ್ಠ ಗಝಲ್ ಎನ್ನುತ್ತಾರೆ.

  2. ಹಾಕಬಹುದು ಎಂದು ಟೈಪ್ ಮಿಸ್ಟೇಕ್

    ಹಾಡಬಹುದು ಎಂದು ಓದಿಕೊಳ್ಳಿ

Leave a Reply

Back To Top