ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

:ನಿಜದ ಪ್ರೀತಿಯ ಹುಡುಕುತ ಕಂಗಾಲಾಗಿದೆಯೋ ಈ ದಿಲ್
ಸತ್ಯದ ಪ್ರೇಮವ ತಡಕಾಡುತ ಬೆಂಡಾಗಿದೆಯೋ ಈ ದಿಲ್

ಜಗದ ಹುಚ್ಚಾಟಗಳಿಗೆ ಬಳಲಿ ಬಳಲಿ ಬೆಚ್ಚಿ ಬಿದ್ದಿರುವೆನು
ನಂಬಿದ ಸ್ನೇಹವ ಕರೆಯುತ ತುಂಡಾಗಿದೆಯೋ ಈ ದಿಲ್

ಆಡೋ ಮಾತುಗಳ ನಲಿವೆಂದು ತಿಳಿದು ನೊಂದಿರುವೆ
ಜೀವದ ಒಲವ ಬಯಸುತ ನಂಜಾಗಿದೆಯೋ ಈ ದಿಲ್

ಕಣ್ಣೋಟದ ಹೂಬಾನವೆಂದು ಮರುಳಾಗಿ ಹೋಗಿರುವೆ
ಜಿನುಗುವ ಜೇನ ಅರಸುತ ತಪ್ತವಾಗಿದೆಯೋ ಈ ದಿಲ್

ಅಂತರಾತ್ಮದಂಕುರಿಸಿದ ಬಂಧ ದೇವರು ಕರುಣೆಯೆಂದೆ
ಮಾಸದ ತಿಳಿಗೊಳವ ನೀರಿಕ್ಷಿಸುತ ಬೇಸತ್ತಿದೆಯೋ ಈ ದಿಲ್

ಫಲಾಪೇಕ್ಷೆ ಬಯಸದೆ ಸತ್ಯ ಸಾಕ್ಷಾತ್ಕಾರವೆಂದು ಒಪ್ಪಿದೆ
ಕುಂದದ ಬಯಕೆಯ ಹರಡುತ ಕರಗುತಿದೆಯೋ ಈ ದಿಲ್

ಸಂಬಂಧವೆಂದರೆ ಆತ್ಮದನುಸಂಧಾನವೆಂದವಳು ಈ ಅನು
ಮೋಸದ ಸಂಚಲ್ಲಿ ಸಿಕ್ಕಿಕೊಳ್ಳುತ ಸುಕ್ಕುಗಟ್ಟಿದೆಯೋ ಈ ದಿಲ್


Preview in new tab

About The Author

Leave a Reply

You cannot copy content of this page

Scroll to Top