ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬರುತಲಿದೆ ಧಾವಿಸಿ ಹೊಸ ವರುಷ
ವರುಷ ವರುಷಕೂ ಹೊಸ ಸಂಕಲ್ಪಗಳು
ಸಂಕಲ್ಪಗಳು ಕೇವಲ ಮಾತುಗಳಾಗದೆ ಇರಲಿ
ಇರಲಿ ನಮ್ಮೊಳಗೆ ಕನಸು ಕಾಣುವ ಮನಸು
ಮನಸು ಮನಸುಗಳನು ಬಂಧಿಸೋಣ
ಬಂಧಿಸೋಣ ಪ್ರೀತಿ ಸೌಹಾರ್ದತೆ ಸೇತುವೆ
ಸೇತುವೆ ಕಟ್ಟೋಣ ಹೃದಯ ಹೃದಯಗಳಿಗೆ
ಹೃದಯಗಳಿಗೆ ಹರಡಲಿ ಬಾಂಧವ್ಯದ ಬೆಳಕು
ಬೆಳಕು ಮೂಡಲಿ ಹೊಸ ವರ್ಷದ ಹೊಸ್ತಿಲಿಗೆ
ಹೊಸ್ತಿಲಿಗೆ ಪ್ರೀತಿ ರಂಗವಲ್ಲಿ ಚೆಲ್ಲಿ ಆಮಂತ್ರಿಸಿ
ಆಮಂತ್ರಿಸಿ ಹರ್ಷಿಸೋಣ ಹೊಸ ದಿನಗಳನು
ಹೊಸ ದಿನಗಳನು ಪ್ರಾರಂಭಿಸೋಣ ಹೊಸತನದಿ
ಹೊಸತನದಿ ಹೊಸ ಭಾವ ಮೂಡಿ ನಲಿಯೋಣ
ನಲಿಯೋಣ ನಗಿಸುತ ಮೆಲುಕದೆ ಕಹಿನೆನಪ
ಕಹಿನೆನಪ ಮರೆತು ಗುರಿಯೆಡೆಗೆ ಸಾಗೋಣ
ಸಾಗೋಣ ಒಂದಾಗಿ ದೇಶದುನ್ನತಿಗೆ ಶ್ರಮಿಸುತ


About The Author

1 thought on “ಮಧುಮಾಲತಿ ರುದ್ರೇಶ್ “ಆಮಂತ್ರಿಸಿ ಹರ್ಷಿಸೋಣ””

  1. ಹೊಸ ಬರಹಗಾರರನ್ನು ಪ್ರೋತ್ಸಾಹಿಸುತ್ತಿರುವ ತಮಗೆ ತುಂಬು ಧನ್ಯವಾದಗಳು

Leave a Reply

You cannot copy content of this page

Scroll to Top