“ಹಳೆಯ ವರ್ಷಕ್ಕೆ ವಿದಾಯ,ಹೊಸ ವರ್ಷಕ್ಕೆ ಸ್ವಾಗತ” ಭಾರತಿ ಸಂ ಕೋರೆ.

ಹಳೆಯ ವರ್ಷದಲ್ಲಿ ಮರೆಯಲಾಗದ ಅನುಭವದೊಂದಿಗೆ
ಹೊಸ ವರ್ಷದ ಆಗಮನ.


ಕಳೆದು ಹೋದ ಕ್ಷಣ, ನಿಮಿಷ,ಗಂಟೆ,ದಿನಗಳು, ಹಾಗೇ ವರ್ಷ ಕೂಡ ಬದುಕು ಮತ್ತು ನಮ್ಮ ಭವಿಷ್ಯಕ್ಕೆ ಒಂದು ಅವಿನಾಭಾವ ಸಂಬಂಧವಿದೆ.
ದೇವರು ಕರುಣಿಸಿದ ನಮ್ಮ ಆಯುಷ್ಯದಲ್ಲಿಯ ಒಂದು ವರ್ಷ ಕಡಿಮೆಯಾಯಿತು ಎನ್ನುವುದು ಮೊದಲು ನಾವುಗಳು ಅರ್ಥಮಾಡಿಕೊಳ್ಳಬೇಕು. ಏಕೆಂದರೆ,ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷದ ಮುಂಜಾನೆಗೆ ಸ್ವಾಗತ ಕೋರುವ ಕಾತುರದಲ್ಲಿ ಈಗ ನಾವೆಲ್ಲ ಇದ್ದೀವಿ. ಈ ಹಿಂದಿನ ವರ್ಷದಲ್ಲಿ ನಾವೆಲ್ಲ ಕೋರೋಣ ಬಂದ ಸಂದರ್ಭ, ಸಾವಿನ ಕದ ತಟ್ಟಿ ಮರಳಿ ಬಂದವರು. ಅದರಲ್ಲಿ ಕೆಲವರು ಬಲಿಯಾಗಿದ್ದು ಉಂಟು. ಅದು ಮರೆಯಲಾಗದ ಕೆಟ್ಟ ಘಟನೆ. ಕೋವಿಡಗೆ ಬಲಿಯಾದವರು ನಮ್ಮ ಸಂಬಂಧಿಕರೇ ಆಗಿದ್ದರು ಕೂಡ ಅವರ ಅಂತ್ಯಕ್ರಿಯೆಗೆ ಹೋಗಲಾಗಲಿಲ್ಲ  ಅಂತಹ ಒಂದು ಪರಿಸ್ಥಿತಿ ನಿರ್ಮಾಣವಾಗಿತ್ತು. ಸಹಸ್ರಾರು ಜನರು ನಿರ್ಗತಿಕರಾದರು. ಶಾಲಾ,ಕಾಲೇಜು ಮಕ್ಕಳ ಶಿಕ್ಷಣ ಹಾಳಾಗುವುದರ ಜೊತೆಗೆ ಕೆಲಸವಿಲ್ಲದೆ ತಿನ್ನಲು ಅನ್ನ ಕೂಡ ಸಿಗದಂಥ ಅನುಭವ. ಹಣದ ಹೊಳೆ ಹರಿಸಿದರೂ ಜೀವ ಉಳಿಯುತ್ತೆ ಅನ್ನುವುದು ಖಚಿತವಿರಲಿಲ್ಲ.ಅವಾಗ ಎಲ್ಲರಿಗೂ ಗೊತ್ತಾಗಿದ್ದು ಮನುಷ್ಯನಿಗೆ ಹಣ ಮುಖ್ಯ ಅಲ್ಲ, ನಮ್ಮಗಳ ಜೀವ,ಜೀವನ, ಸಂಬಂಧಗಳು ಮುಖ್ಯ ದುಡ್ಡು ಒಂದೇ ಅಲ್ಲ ಎನ್ನುವುದನ್ನ ಕೋರೋಣ ಗೊತ್ತು ಮಾಡಿಸಿತು.ಅದೊಂದು ಮರೆಯಲಾಗದ ಕರಾಳ ವರ್ಷ ಅಂತ ಹೇಳಬಹುದು.
ಅದಕ್ಕೆ ನಾವೆಲ್ಲ ಹಳೆಯ ವರ್ಷದ ಅನುಭವವನ್ನು ಮರೆಯದೆ ಅದನ್ನು ನೆನೆಯುತ್ತಾ. ಹಲವಾರು ತಲ್ಲಣಗಳ ಮದ್ಯ ನಾವುಗಳು ಬದುಕನ್ನು ಕಟ್ಟಿಕೊಳ್ಳಬೇಕಿದೆ.



ನಾಳೆ ಬರುವ ಹೊಸ ವರ್ಷವನ್ನು ಸ್ವಾಗತಿಸುವ ಮೂಲಕ ಸಂಕಲ್ಪ ಮಾಡಿಕೊಳ್ಳೋಣ. ನಮ್ಮಗಳ ಚಿಂತನೆ,ಹೊಸ ಸಾಧನೆ, ಹೊಸ ವಿಚಾರಗಳನ್ನು ನಮ್ಮದಾಗಿಸಿಕೊಳ್ಳೋಣ.

       ಕೇವಲ ಕ್ಯಾಲೆಂಡರ್ ಬದಲಾವಣೆಯಾಗುವ ವರ್ಷವನ್ನು ಹೊಸ ವರ್ಷ ಅಂತ ನಾವು ಅಂದುಕೊಂಡಿದ್ದೆವೆ.ಆದರೆ ಕ್ಯಾಲೆಂಡರ್ ಜೊತೆಗೆ ನಮ್ಮ ವಿಚಾರ,ನಡೆ,ನುಡಿ, ಬೇರೆಯವರ ಜೊತೆ ವ್ಯವಹರಿಸುವ ರೀತಿ,ನಾನು, ನನ್ನದು ಎನ್ನುವ ಅಹಂ ಇವೆಲ್ಲವನ್ನೂ ಬದಲಾಯಿಸಿಕೊಂಡರೆ ಮಾತ್ರ ಹೊಸ ವರ್ಷ ಸ್ವಾಗತದ ಆಚರಣೆಗೆ ಒಂದು ಅರ್ಥವಿರುತ್ತದೆ.
ನಮ್ಮಲ್ಲಿ ಅದೇ ಹಳೆಯ ದ್ವೇಷ,ರೋಷ,ಅಸೂಯೆ ಇವೆಲ್ಲ ನಮ್ಮಲ್ಲೇ ಹಾಗೆ ಇಟ್ಟುಕೊಂಡು, ಹೊಸ ವರ್ಷದಲ್ಲಿ ಬದಲಾವಣೆ ಹುಡುಕಿದರೆ ಅದು ಎಂದಿಗೂ ಸಿಗಲು ಸಾಧ್ಯವೇ ಇಲ್ಲ.
ಕ್ಯಾಲೆಂಡರ್ ಬದಲಾಗುವ ಮುನ್ನ ನಾವುಗಳು ಬದಲಾಗೋಣ.
ಹೊಸ ವರ್ಷದಲ್ಲಿ ಹಲವಾರು ಒಳ್ಳೆಯ ನೆನಪುಗಳು,ಆಸೆ, ಆಕಾಂಕ್ಷೆ,ಹೊಸ ಪ್ರೇರಣೆಗಳನ್ನು ಮತ್ತೊಮ್ಮೆ ನಮಗೆ ಒದಗಿಸಲು ಬರುತ್ತಿರುವ ಹೊಸ ವರ್ಷಕ್ಕೆ ನಾಳೆಯ ಹೊಸ ದಿನಕ್ಕೆ ನಾವು ಕಾಲಿಡುತ್ತಿದ್ದೆವೆ.
ವರ್ಷದ ಕೊನೆಯ ದಿನ ಎಲ್ಲರೂ ಮೋಜು,ಮಸ್ತಿಯಲ್ಲಿ ಕುಣಿದು ಕುಪ್ಪಳಿಸುವುದು ಆಚರಣೆ ಅಲ್ಲ.

ಕಳೆದು ಹೋಗುತ್ತಿರುವ
ಇಂದಿನ ಹಳೆಯ ದಿನ, ಹಳೆಯ ವರ್ಷ ನಾಳೆಯ ಹೊಸ ಬಗೆಯ ಹೊಸ ಆಲೋಚನೆ,ಹೊಸ ಭಾವನೆಯೊಂದಿಗೆ ನಾವು ಹೊಸ ವರ್ಷವನ್ನು ಸ್ವಾಗತಿಸಲು ಹರ್ಷ ಉಲ್ಲಾಸದಿಂದ ಸಿದ್ಧರಾಗುವುದು
.
ನಾಳೆ ಮುಂಬೆಳಗಿನಲ್ಲಿ ಒಂದು ಆತ್ಮಾವಲೋಕನ ಮಾಡಿಕೊಳ್ಳೋಣ. ಕಳೆದುಹೋದ, ಕಡಿಮೆಯಾದ ನಮ್ಮ ಆಯುಷ್ಯದಲ್ಲಿಯ ಒಂದು ವರ್ಷದಲ್ಲಿ ಮಾಡಲಾಗದ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಯ ಮೂಲಕ ಹೆಜ್ಜೆ ಇಟ್ಟು, ಸುಧೀರ್ಘವಾಗಿ ಪರಿಶ್ರಮದೊಂದಿಗೆ ಒಳ್ಳೆಯ ಮೌಲ್ಯಗಳೊಂದಿಗೆ, ಯಾರಿಗೂ ಕೇಡನ್ನು ಬಯಸದೆ, ಹಳೆಯ ವೈರಿಗಳನ್ನು ಸ್ನೇಹಿತರನ್ನ ಮಾಡಿಕೊಳ್ಳಿ. ಬಂಧು ಬಳಗವನ್ನ ನೆನಪಿಸಿಕೊಂಡು,  ನಾಳೆ ಆಗಮಿಸುವ ಹೊಸ ದಿನವನ್ನು ಹೊಸ ವರ್ಷವನ್ನು ಸ್ವಾಗತಸಲು ಸಿದ್ಧರಾಗೋಣ.
ಕಾಲಚಕ್ರದ ಪರಿಭ್ರಮಣೆಯಲ್ಲಿ ಬರುತ್ತಿರುವ ವಿಶ್ವಮಾನವರಿಗೆ  ಸಿಕ್ಕಿರುವ ಬೆಲೆ ಕಟ್ಟಲಾಗದ ಮಹೋನ್ನತ ವರ್ಷವಾಗಲಿ ಎಂದು ಹೇಳುತ್ತ.
ಹಲವಾರು ಒಳ್ಳೆಯ ಹಾಗೂ ಕೆಟ್ಟ ಅನುಭವಗಳನ್ನು ತೋರಿಸಿಕೊಟ್ಟ ಹಳೆಯ ವರ್ಷಕ್ಕೆ ವಿದಾಯ ಹೇಳುತ್ತ…
ನಾಳೆ ಬರುವ ಹೊಸ ವರ್ಷ ನಿಮಗೆಲ್ಲ ಶುಭವನ್ನು ತರಲಿ ಎಂದು ಆಶಿಸುತ್ತೇನೆ..


Leave a Reply

Back To Top