ಕಾವ್ಯ ಸಂಗಾತಿ
ನಾಗರಾಜ ಜಿ. ಎನ್. ಬಾಡ ಕವಿತೆ
ನಿನ್ನಿಂದಲೇ..
ಸಂಗಾತಿ ನೀನಾದೆ
ತಂಗಾಳಿ ನೀ ತಂದೆ
ಸನಿಹದಲಿ ನೀ ಬರಲು
ಒಲವಿನಲಿ ಮಿಂದೆದ್ದೆ
ನನ್ನೆದೆಯ ಹಾಡಿಗೆ
ಕೊರಳಾಗಿ ನೀ ಬಂದೆ
ನನ್ನುಸಿರ ರಾಗಕೆ
ಇನಿದನಿಯ ನೀ ತಂದೆ
ಕವಿದ ಕಾರ್ಮೋಡವ ಸರಿಸಿ
ಹೊಸ ಬೆಳಕ ನೀ ತಂದೆ
ನನ್ನೆಲ್ಲ ನೋವುಗಳ ಸರಿಸಿ
ಹೊಸ ಖುಷಿಯ ನೀ ತಂದೆ
ಇರುಳಲ್ಲಿ ಬೆಳಗುವ ಚಂದಿರನಂತೆ
ನನಗಾಗಿ ನೀ ಬಂದೆ
ಜಗದ ಖುಷಿಯನೆಲ್ಲ
ನನಗಾಗಿ ನೀ ತಂದೆ
ಶಿಸ್ತು ಸಂಯಮವ
ಬಾಳಲ್ಲಿ ನೀ ತಂದೆ
ಮನದ ಭಾವನೆಗಳ
ಕದವನ್ನು ನೀ ತೆರೆದೆ
ಬರಡಾದ ಭಾವನೆಗಳನ್ನು ಸರಿಸಿ
ಜೀವ ಸೆಲೆಯ ಚಿಮ್ಮಿಸಿದೆ
ಬದುಕಿನ ದಾರಿಯನು
ನೀ ಸುಂದರ ಗೊಳಿಸಿದೆ
ಬದುಕಲ್ಲಿ ಹೊಸ
ಭರವಸೆಯ ಬೆಳಕಾಗಿ ಬಂದೆ
ನನ್ನಲ್ಲಿ ನೂರಾರು ನವ
ಕನಸುಗಳ ತಂದೆ
ಅವಿಸ್ಮರಣೀಯ ಕ್ಷಣಗಳಿಗೆ
ನೀ ಸಾಕ್ಷಿಯಾದೆ
ನಾಗರಾಜ ಜಿ. ಎನ್. ಬಾಡ
SUPPPPPPPPPPPPPERRRRRRRRRRR
ಪ್ರೀತಿ ನಿರಂತರ ಬದುಕಿಗೆ ಸ್ಫೂರ್ತಿಯನ್ನು ನೀಡುವ ಸುಂದರ ಅಸ್ಮಿತೆ. ಅಲ್ಲೆಲ್ಲಾ ಒಂದು ಆರಾಧನೆ ಮನಸ್ಸು ತುಂಬಿ ನಿಂತರೆ ಬದುಕು ಪಲ್ಲವಿಸುತ್ತದೆ. ಸಹಜ ಸಾಲುಗಳ ಹಿರಿತನದೊಟ್ಟಿಗೆ ಒಲವಲ್ಲಿ ಕರಗಿಬಿಡುವ ಹೃದಯದ ಮಾತಿದೆ. ಚೆಂದದ ಸಾಲುಗಳಲ್ಲಿ ಬಣ್ಣಗಳಿವೆ. ರೂಪಗಳಿವೆ. ಭಾವಗಳಿವೆ. ಪ್ರೀತಿಸುವ ಮಾತುಗಳಿವೆ……… ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ಬದುಕಿಸುವ ಭರವಸೆ ಭಾವ ಇದೆ……
ನಾಗರಾಜ ಬಿ.ನಾಯ್ಕ
ಹುಬ್ಬಣಗೇರಿ.
ಕುಮಟಾ……