ಕಾವ್ಯ ಸಂಗಾತಿ
ಭಾರತಿ ಅಶೋಕ್
ಪಕ್ಷ ಬದಲಿಸಿದ್ದಾನೆ ಕರ್ತ
ತಮ್ಮ ಪಾಪದ ಅರಿವಿಲ್ಲ
ಕ್ಷಮಿಸಿಬಿಡು ಪ್ರಭುವೇ
ಎನ್ನುವುದಿಲ್ಲ ನಾನು
ನಿನ್ನ ಪ್ರಭು ಪಕ್ಷ ಬದಲಿಸಿದ್ದಾನೆ
ನಿನ್ನ ಮಾತನ್ನು ಅವನು
ತಪ್ಪಾಗಿ ಅರ್ಥೈಸಿಕೊಂಡಿದ್ದಾನೆ
ಇಲ್ಲ-ಪಾಪಿ ಪಕ್ಷದ
ಆಮಿಷಕ್ಕೊಳಗಾಗಿದ್ದಾನೆ
ಹೆಣ್ಣನ್ನು ವಿವಸ್ತ್ರಗೊಳಿಸುವಾಗ
ಕೈ ಕಬಂಧವಾದಾಗಲೇ ಅವನಲ್ಲಿದ್ದ
ಎನ್ನುವ ಗುಮಾನಿ.
ಇಸ್ರೆಲ್ ಪ್ಯಾಲೆಸ್ತೇನ್ ನಡುವೆ
ಪ್ರೇಮ ಸೇತು ಕಟ್ಟಬೇಕಿದ್ದವನು
ರಕ್ತದಾಹಿಯಾಗುತ್ತಿದ್ದನೆ?
ನೀನಂದುಕೊಂಡಂತೆ
ನಿನ್ನ ಪ್ರಭು ನನ್ನ ಹೆಣ್ತನ ಕಾಯನು
ನನ್ನಾತ್ಮ ರಕ್ಷಣೆ ನನ್ನ ಹೊಣೆ
ಅದಕೆ ಬೂಟನ್ನೆ ಎತ್ತಿಟ್ಟಿದ್ದೇನೆ
ನೀನದನ್ನು
ಅವನು ಕೊಟ್ಟ ಶಕ್ತಿ ಎಂದುಕೊಂಡರೆ
ನಾನದಕೆ ಹೊಣೆಯಲ್ಲ
ಭಾರತಿ ಅಶೋಕ್