ಕಾವ್ಯ ಸಂಗಾತಿ
ಮರುಳಸಿದ್ದಪ್ಪ ದೊಡ್ಡಮನಿ
ರೈತಣ್ಣ
ಮಳೆ ಭಾರದ ಒಡಲಿಗೂ ಭರವಸೆಯ
ಬೀಜ ಬಿತ್ತಿ
ತುತ್ತಿನ ಚೀಲ ತುಂಬಿಸಲು
ತನ್ನ ಕನಸು ಗಾಳಿಗೆ ತೂರಿ
ನೆಲದವ್ವನ ನಂಬಿದವ
ಯಾರ ಹಂಗು ಮೂಲಾಜಿಗು
ಭಾಗದೆ ನೆಗಿಲಲಿ ವಸುಧೆಯ
ಬಗೆದು ಬೆವರ ಹನಿ ಉಣಿಸಿ
ಸುಡುವ ಬಿಸಿಲಿಗೆ ಮೈ ತಾಗಿಸಿ
ಉತ್ತಿ ಉಡಿಯ ತುಂಬಿಸಿ
ಹಸಿವಿನ ಪರಿವೆಯ ಮರೆತು
ಹಸಿರು ಉಡಿಸುವ ಕಾಯಕದಿ
ಬೆರೆತು ತನ್ನೆಲ್ಲ ವ್ಯಾಮೋಹವ
ಮರೆತು ನೆಲದವ್ವನ ಹಸಿರಿಗೆ
ಉಸಿರಾಗಿ ಜೀವ ತೇಯುತ
ಲೋಕದ ಪರಿವೆ ಮರೆತು
ಕಾಯ ಕಾಯಕದಿ ಬೆರೆತು
ಜಗದೊಡಲ ತುಂಬಿಸಲು
ನಿತ್ಯ ಹೊತ್ತುಗಳ ಪರಿವೆಯ
ಮರೆತು ದುಡಿವ ತ್ಯಾಗಿ ರೈತಣ್ಣ
ಮರುಳಸಿದ್ದಪ್ಪ ದೊಡ್ಡಮನಿ