ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರವೆತ್ತಿ ‌ ಕೈಮುಗಿವೆ‌ ರೈತನಿಗೆ
ಹಸಿವನಿಗಿಸುವ ಅನ್ನದಾತನಿಗೆ
ಹಗಲಿರುಳೆನ್ನದೆ ಶ್ರಮದಿ ದುಡಿಯುವ ರೈತನಿಗೆ.

ಕಷ್ಟವ ಎದುರಿಸುವ ಛಲಗಾರನಿಗೆ
ನಾಡನು ಕಂಗೊಳಿಸುವ ಶ್ರಮದಾತನಿಗೆ
ಅನ್ನದ ಪ್ರತಿ ಕಣದಿ ಇಹುದು ಆತನ ಶ್ರಮವು ಅದುವೇ ನಮ್ಮ ರೈತನ ತಾಳ್ಮೆಯ ಗುಣವು.

ಜನರನ ಸಲಹುವ ನಿನಗೆ
ಇಹುದು ದೇವನ ಒಲುಮೆಯು
ಬೆವರ ಸುರಿಸಿ ದುಡಿಯಲು
ಸಿರಿಯು ಬರುವುದು ಕಾವಲು.

ಮಣ್ಣಿನ ಮಗನು ಫಲವನು ಬಯಸುತ್ತ ದೇವರ ಬೇಡುವನು
ಗೆದ್ದೇ ಗೆಲ್ಲುವೆ ಎನ್ನುತ ಸಾಗುತ
ಎಲ್ಲರ ಮನದಲ್ಲಿ ಹಸಿರಾಗಿ ಉಳಿಯುವನು.


About The Author

3 thoughts on “ನಾಗರತ್ನ ಎಚ್ ಗಂಗಾವತಿ ಕವಿತೆ-ಅನ್ನದಾತನಿಗೊಂದು ನಮನ”

  1. ತುಂಬಾ ತುಂಬಾ ಸೊಗಸಾಗಿದೆ ನಿಮ್ಮ ಕಾವ್ಯ ಕವನ ಸುಂದರವಾದ ಅರ್ಥ ಪೂರ್ಣ ಸಾಲುಗಳು ರೈತರ ಬಗ್ಗೆ ಚೆನ್ನಾಗಿ ಬರಿದಿದ್ದೀರಿ

Leave a Reply

You cannot copy content of this page

Scroll to Top