ಎ. ಹೇಮಗಂಗಾ ಅವರ ಹೊಸ ತನಗಗಳು

ರವಿ ಇಲ್ಲದ ಮೇಲೆ
ಬುವಿಗೆ ಬೆಳಕೆಲ್ಲಿ ?
ನೀನು ಇಲ್ಲದ ಮೇಲೆ
ನನಗೆ ಬದುಕೆಲ್ಲಿ ?

ಸುಪ್ತ ಆಸೆಗಳೆಲ್ಲ
ಮುಕ್ತವಾಗಿವೆ ಈಗ
ನಿನ್ನ ಅಪ್ಪುಗೆಯಲ್ಲಿ
ನನ್ನ ಒಪ್ಪಿಗೆಯಲ್ಲಿ

ನಿನ್ನ ಬಾಳಹಾದಿಗೆ
ಚೆಲ್ಲಿದೆ ಹೂ ಮಲ್ಲಿಗೆ
ಅದ ಹೊಸಕಿ ಹಾಕಿ
ಹೋದೆ ನೀನು ಮೆಲ್ಲಗೆ

ಪ್ರೀತಿ ಚಂದ್ರನಿರದೇ
ಮನದಿರುಳ ಬಾನ
ಬೆಳಗುತ್ತಲೇ ಇವೆ
ನೆನಪ ತಾರೆಗಳು

ನಿನ್ನೀ ಭಾವಬಂಧನ
ಪ್ರೀತಿ ಬಾಹುಬಂಧನ
ಚಂಚಲ ಮನಸಿಗೆ
ಹಾಕಿದೆ ದಿಗ್ಬಂಧನ


One thought on “ಎ. ಹೇಮಗಂಗಾ ಅವರ ಹೊಸ ತನಗಗಳು

Leave a Reply

Back To Top