ಸುಕುಮಾರ ಅವರಹೊಸ ಕವಿತೆ

ಅಪ್ಪನು ಹಾಕಿದ ಆಲದ ಮರದ ನೆರಳು ಇರುಳು ಮೂಡುವ ತನಕ
ತಪ್ಪನು ಮಾಡಿದ ಮೋದದ ಮನದ ತೆವಲು ಸರಳು ಜೀರುವ ತನಕ

ದುಡಿದು ದೂಡಿದ ಬದುಕು ಕರಕೆ ಬೆಸೆದು ಆಯಿತು ಸಂಸಾರ ಸಾರ್ಥಕ
ಪೊರೆದು ಪಡೆದ ಪದಕ ಕ್ಷಣಿಕ ತಂದೈತಿ ಪುಳಕ ಕೊಳೆವ ತನಕ

ಸಾಧನೆ ಹಾದಿಯು ಕಠಿಣ ಛಲದಿ ತೀರಿಸು ಸಾಫಲ್ಯ ಪಡೆದು ನಗಲು
ವೇದನೆ ಸರಿಸಿ ಮುನ್ನಡೆ ಸರ್ವವೂ ಬಳುಕಿ ಬರದು ಮೊಳೆವ ತನಕ

ಕೈಚಾಚಿ ಬೇಡದೆ ರಟ್ಟೆಯ ಮುರಿದು ಕಾಯಕ ಮಾಡಲು ಅನ್ನವು ಸೇರದೇ
ಶುಚಿಯ ಕಾಪಲು ಕಾಯದಿ ಮಾನಸ ಲಹರಿ ಹರಿಸು ಹಿಗ್ಗುವ ತನಕ

ರವಿಯು ಬೆಳಗಿ ಛವಿಯ ಪಸರಿ ಜ್ಞಾನಿಯು ಸುಜ್ಞಾನ ಎಲ್ಲೆಡೆ ಹರಡಿ
ಕೀರುತಿ ಪತಾಕೆ ಹಿಡಿದು ಯಾತ್ರಿಸು ಜಗವು ನಲಿದು ಬೀಗುವ ತನಕ


Leave a Reply

Back To Top