ಗಂಡಿನ ಜೀವನದಲ್ಲಿ ಹೆಣ್ಣಿನ ಪಾತ್ರ-ಅನ್ನಪೂರ್ಣ ಸುಭಾಷಚಂದ್ರ ಸಕ್ರೋಜಿ ಪುಣೆ ಲೇಖನ

ಸೃಷ್ಟಿಕರ್ತ ಶಿವ ಆದರೆ ಅವನಿಗೆ ಸೃಷ್ಟಿ ಉತ್ಪನ್ನ ಮಾಡಲು ಶಕ್ತಿ ಬೇಕಾಯಿತು. ನಾವೂ ನಿತ್ಯ ಜೀವನದಲ್ಲಿ 2, 3 ದಿನ ಊಟ ಆಹಾರ ಬಿಟ್ಟರೆ ನಿಶ್ಯಕ್ತಿ ಉಂಟಾಗುತ್ತದೆ ಅಲ್ಲವೆ? ಶಕ್ತಿ ಇಲ್ಲದೇ ದೇಹದಲ್ಲಿ ಚೈತನ್ಯ ಇರುವುದಿಲ್ಲ. ಶಿವನಿಲ್ಲದೇ ಶಕ್ತಿಯಿಲ್ಲ, ಶಕ್ತಿಯಿಲ್ಲದೇ ಶಿವನಿಲ್ಲ.
ಗಂಡು : ಹೆಣ್ಣೇ ನೀನೆಷ್ಟು ಜಾಣೆ ಕಣೆ
ತಾಯಿಯಾಗಿ, ಬಸಿರಿಂದ ಉಸಿರುವವರೆಗೂ ಪ್ರೀತಿ ಅಂತಃಕರಣ
ಆಹಾರ ಕೊಡುವ ಅನ್ನಪೂರ್ಣೆ ನೀನು.
ಹೆಣ್ಣು : ಅದಕೆ ಕಾರಣ ನೀನು ವೀರಪುರುಷ ಶಂಕರ
ಗಂಡು : ಮೊದಲ ಪಾಠ ಕಲಿಸಿ ವಿದ್ಯಾಬುದ್ಧಿ ನೀಡಿ ಜ್ಞಾನ ನೀಡುವ ಸಾಹಿತ್ಯ ಸಂಗೀತದಲಿ ಮೈಮರೆವಂತೆ ಮಾಡುವ ಅಕ್ಕ ತಂಗಿ ಗೆಳತಿಯ ರೂಪದ ಶಾರದೆ ನೀನು.
ಹೆಣ್ಣು : ಅದಕೆ ಕಾರಣ ನಿನ್ನ ಮುಗ್ಧ ಮನಸ್ಸು ಪರಿಶುದ್ಧ ಅಂತಃಕರಣ.
ಗಂಡು : ಬಾಳು ಬೆಳಗಲು ಬಂದ ನನ್ನ ಹೃದಯದರಸಿ, ಲಾವಣ್ಯವತಿ ನೀನು ನನಗೆ ಅರ್ಪಿತ ನಾನು ನಿನಗೆ ಅರ್ಪಿತ. ಮನೆಯನು ಸಂರಕ್ಷಿಸುವ ದುರ್ಗೆ ನೀನು ದೇಹವೆರಡಾದರೂ ಆತ್ಮವೊಂದೇ ಎನುತ ನನ್ನ ಸಿರಿ ಸಂಪತ್ತಿನ ಭಾಗ್ಯದರಸಿ
ಲಕ್ಷ್ಮಿ, ಅಷ್ಟಲಕ್ಷ್ಮಿ, ಸಂತಾನಲಕ್ಷ್ಮಿ ನೀನು.
ಹೆಣ್ಣು : ನನ್ನ ನಾರಾಯಣನೇ ನಿನಗೆ ನಮೋನ್ನಮಃ.
ಗಂಡು : ನನ್ನ ತಾಯಿಯ,ಹಾಗೂ ಪತ್ನಿಯ ಪ್ರತಿರೂಪಳಾಗಿ ನನ್ನ ಜೀವವೇ ನೀನಾಗಿ ನಿನ್ನ ಸುಖವನ್ನೇ ನನ್ನ ಗುರಿಯಾಗಿ ಮಾಡುವ ನನ್ನ ಶರೀರದ ಜೀನ್ಸಗಳನ್ನೇ ಹಂಚಿಕೊಂಡು ಜನಿಸಿ ಪ್ರೀತಿಯ ಅಮೃತಧಾರೆ ಹರಿಸುವ ಎಲ್ಲ ಹೆಸರಿನ ಮಗಳಿಗೆ ಚಿರಋಣಿ ನಾನು.
ಹೆಣ್ಣು : ತಂದೆಯೇ ತಲೆಬಾಗಿ ವಂದನೆ.
ಗಂಡು : ಗಂಡಿನ ಜೀವನದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದೆ.
ಹೆಣ್ಣಿಲ್ಲದ ಜೀವವಿಲ್ಲ
ಹೆಣ್ಣಿಲ್ಲದೆ ಜೀವನವಿಲ್ಲ
ಅದಕೆ ಹೆಣ್ಣಿಗೆಆದ್ಯಸ್ಥಾನ
ಸೀತಾರಾಮ ರಾಧಾಕೃಷ್ಣ
ಗೌರಿಶಂಕರ ಉಮಾಪತಿ
ಪಾರ್ವತಿ ಪರಮೇಶ್ವರ
ಅನ್ನಪೂರ್ಣ ಸುಭಾಷ

ಈ ರೀತಿ ಇರುವುದು ಜಗದ ನಿಯಮ. ಸೂರ್ಯ ಚಂದ್ರರ ಜೋಡಿಯಂತೆ, ಗಂಡು ಹೆಣ್ಣು ಆತ್ಮ ಪರಮಾತ್ಮ ಒಂದೇಯಾಗಿ ಜೀವನದ ಕೊನೇವರೆಗೂ ಗಂಡಿನ ಜೀವನದಲ್ಲಿ ಹೆಣ್ಣಿನ ಪಾತ್ರ ಪ್ರಮುಖವಾಗಿದೆ.


Leave a Reply

Back To Top