‘ನಮ್ಮೂರ ಜಾತ್ರೆ’ಚೈತ್ರಾ ವಿ.ಮಾಲವಿಯವರುಬರೆದಿದ್ದಾರೆ

ನಮ್ಮೂರು ಜಾತ್ರೆ ಬಂದ್ರ ಸಾಕು  ನಮುಗ ಎಲ್ಲಿಲ್ಲದ ಖುಷಿ ಆಕ್ತಿತ್ತು. ಮನಿ, ಹಬ್ಬದ್ ಸಂಭ್ರಮದಾಗ ಮುಳುಗಿರುತ್ತಿತ್ತು. ನಮ್ಮೂರ್ ಜಾತ್ರೆ ರಜದಾಗ ಬಂದೈತಿ ಅಂದ್ರ ಕೇಳ್ತೀರಾ ನಮ್ಮ್ ಹಾರಾಟ. ಎಪ್ರಿಲ್ ತಿಂಗಳದಾಗ ಬರೋ,  ಹುಣುವಿ ಆಗಿ ಐದು ದಿನುಕಾಗ್ಲಿ, ಇಲ್ಲಾ ಒಂಬತ್ತು ದಿನುಕಾಗ್ಲಿ ಬರೋ ಗುರುವಾರದಿನವೇ ನಮ್ಮೂರು ಜಾತ್ರೆ. ಗುರುವಾರದಿನ ಯಾಕಂದ್ರ, ಗುರುವಾರ ಗುರುಬಸವೇಶ್ವರ ದೇವ್ರ ದಿನ. ಅದ್ಕ ಹಿಂದಿನ್ ಕಾಲ್ದಿಂದಾನೂ ಗುರುವಾರದಿನವೇ  ನಮ್ಮೂರು ತೇರು ಎಳೆಯೋದು. ನಮ್ದು ಕೂಡು ಕುಟುಂಬ. ಮನಿ ತುಂಬ ಮಂದಿ ಇರ್ತಿದ್ರು. ಮಕ್ಳು ಮೊಮ್ಮಕ್ಳು ಅಂಥ ತುಂಬಿ ತುಳುಕ್ತ ಇರ್ತಿತ್ತು ನಮ್ಮನಿ.
           ನಮ್ಮೂರು ಜಾತ್ರೆದಿನ ಬೆಳಗ್ಗೆ ಅಂದು ನಮ್ಮೂರು ಊರಮ್ಮನ ಗುಡ್ಯಾಗ ಪೂಜೆ-ಪುನಸ್ಕಾರ ನಡಿತೇತಿ. ನಮ್ಮನಿ ತುಂಬಾ ಬರಿ ಸಣ್ಣೋರ ಇದ್ವಿ. ಅವ್ರ ಮೈ ತೊಳೆಯೋದು, ಹೊಸ್ಸಸ ಬಟ್ಟೆ ಹಾಕೊತ್ತಿಗ ತೇರು ಎಳಿತೇತಿ ಅನ್ನೋರು ಮನಿಗ. ಒಂದು ವಾರಕ್ಕ ಮುಂಚೇನ ನನ್ನ ಸಣ್ಣ ದೊಡ್ಡಪ್ಪ ಎಲ್ರಿಗೂ ಬಟ್ಟೆ ತರ್ತಿದ್ರು. ಸಂಭ್ರಮ, ಸಡಗರದಿಂದ ಎಲ್ರೂ ಒಟ್ಟಿಗೆ ಊರಮ್ಮನ ಗುಡಿಗೆ ನೋಡಕ ಹೋಕಿದ್ವಿ. ಸಣ್ಣೋರು ದೊಡ್ಡೋರು ಅನ್ನದೇ ಅಲ್ಲಿ ಊರಿಗೆ ಊರೆ ನೆರಿತಿತ್ತು. ಊರಮ್ಮನ ಗುಡಿ ಅಕ್ಕ-ಪಕ್ಕದಾಗ ಇರೋ ಮನಿ ಮಾಳಿಗೆಯೆಲ್ಲಾ ತುಂಬಿರ್ತಿತ್ತು ಜನ. ಡೋಲು ಬಡಿಯೋರು ಐದಾರು ಜನ ಇರ್ತಿದ್ರು. ಊರಿನಾಚೆ ಇರೋ ದುರುಗಮ್ಮನ ಗುಡಿಯಿಂದ, ಊರಮ್ಮನ ಗುಡಿವರಿಗೂ ಮೆರವಣಿಗೆ ಮಾಡ್ತಾ ಜೊತೆಗ, ತಮ್ಮ ಕೈಲಿರುವ ಡೋಲು ಬಾರಿಸ್ತಾ ಬರ್ತಿದ್ರು. ಅವರ ಹಿಂದೆ ನೂರಾರು ಜನ ಹೆಜ್ಜೆ ಹಾಕೋರು.  ಆ ಮೆರವಣಿಗೆ ಊರಮ್ಮನ ಗುಡಿಗೆ ಬರೊತ್ತಿಗೆ ಅಲ್ಲಿ ಒಂದಿಷ್ಟು ಮಂದಿ ಬಂದಿರುತಿದ್ರು. ಡೋಲು ಕುಣಿತದವರು ಅದ್ನ ಬಾರುಸ್ತ, ಗುಡಿ ಸುತ್ತ, ಐದು ಬಾರಿ ಸುತ್ತಿ, ಗುಡಿ ಒಳ್ಕ ಹೋಗಿ ಪೂಜೆ ಮಾಡುತ್ತಿದ್ರು. ಅವ್ರು ಪೂಜೆ ಮಾಡಿ ಹೊರಗ ಬಂದ್ಮ್ಯಾಗ, ಊರಿನ್ ಜನ ಹೋಗಿ ಕೈ ಮುಗ್ಯಾಕ ಆಗ್ದೆ ತಿಕ್ಕಾಟ ಅತ್ತುತಿತ್ತು. ಅದ್ರಾಗ ಒಬ್ಬಬ್ರ ಕೈ ಮುಗ್ದು ಹೊರಗ ಬರ್ತಿದ್ರು.


          ನಾವೂ ಹುರಮ್ಮನ ಗುಡಿ ಒಳಕೋಗಿ ಕೈ ಮುಗ್ದು, ಕಂಬ್ಕ ನೇತಾಕೀರೋ ಡಬ್ಬಕ ಕೈ ಹಾಕಿ ಅದ್ರಲ್ಲಿನ ಆದಾರ ತಕ್ಕಂಡು, ಹಣ್ಗೆ ಹಚ್ಚಕೊಂಡು ಹೊರಗ ಬರ್ತಿದ್ವಿ. ಆ ಗಲಾಟ್ಯಾಗ ಯಾರದ್ರೂ ನಮ್ಮ್ ಗೆಳತೀರೂ ಬಂದಾರೇನಂಥ ಹುಡುಕಾಟ ಅತ್ತುತಿತ್ತು. ಅಂದು ಸಂಜೆ ತೇರು ಎಳೆಯೋದು ನೋಡೋಕೆ ಹೋಗ್ತಿದ್ವಿ. ಅಲ್ಲಿ ಸಾವಿರಾರು ಜನ ನೆರೆದು ಭಕ್ತಿ ಭಾವದಿಂದ ತೇರಿಗೆ ಬಾಳೆಹಣ್ಣು ಎಸೆದು ಕೈ ಮುಗಿಯುತ್ತಿದ್ದರು. ನಮಗ ಎಲ್ಲಿಲ್ಲದ ಖುಷಿ. ಯಾಕಂದ್ರ, ಜಾತ್ರೆಗೆ ಬರುವ ಬಣ್ಣಬಣ್ಣದ ರಿಬ್ಬನ್ ಗಳು ಬಳೆಗಳು, ಬಲೂನುಗಳು ಇವುಗಳನ್ನು ಕೊಡಿಸಿಕೊಳ್ಳೋಕೆ ನಮ್ಮ ಹಠ ಸಾಗುತ್ತಿತ್ತು.


One thought on “‘ನಮ್ಮೂರ ಜಾತ್ರೆ’ಚೈತ್ರಾ ವಿ.ಮಾಲವಿಯವರುಬರೆದಿದ್ದಾರೆ

Leave a Reply

Back To Top